ಶ್ರೀನಗರ: ವೃಂದಾವನದಲ್ಲಿ ವಿಧವೆಯರು ಹೋಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ, ಎಲ್ಲಾ ದೇಗುಲಗಳಿಗೂ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದಿದ್ದಾರೆ.
ಮಹಿಳಾ ಪ್ರವೇಶ ಸಂಬಂಧ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಸಮರ್ಥಿಸಿಕೊಂಡಿರುವ ಅವರು, ಮಹಿಳೆಯರು ಈ ದೇಶದ ಅವಿಭಾಜ್ಯ ಅಂಗ, ಅವರ ಸಬಲೀಕರಣವಾಗಬೇಕಾದರೆ ಮೊದಲು ಅವರು ಎಲ್ಲಾ ದೇಗುಲಗಳಿಗೂ ಪ್ರವೇಶವನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ.
’ಇತ್ತೀಚಿಗೆ ಮಹಿಳೆಯರಿಗೆ ದೇಗುಲಗಳು ಪ್ರವೇಶ ನೀಡುತ್ತಿದದು ಇದೊಂದು ಉತ್ತಮ ಬೆಳವಣಿಗೆ. ಮಹಿಳೆಯರು ಈ ದೇಶದ ಅವಿಭಾಜ್ಯ ಅಂಗ, ಮಹಿಳಾ ಸಬಲೀಕರಣ ಬೇಕೆಂದಾದರೆ ಎಲ್ಲಾ ದೇಗುಲಗಳು ಅವರಿಗೆ ಪ್ರವೇಶ ನೀಡುವುದು ಅತ್ಯಗತ್ಯ’ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶ ಪುರಾತನ ದೇಗುಲದಲ್ಲಿ ಸಂಪ್ರದಾಯವನ್ನು ಮುರಿದ ವಿಧವೆಯವರು ಪರಸ್ಪರ ಬಣ್ಣವನ್ನು ಎರೆಚಿಕೊಂಡು ಹೋಳಿ ಹಬ್ಬವನ್ನು ಆಚರಿಸಿದರು. ಇದೊಂದು ಅದ್ಭುತ ಘಟನೆ. ಇದರ ಬಗ್ಗೆ ನಮಗೆ ಹೆಮ್ಮೆಯಿರಬೇಕು, ಭಾರತ ಸಕಾರಾತ್ಮಕ ರೀತಿಯಲ್ಲಿ ಮುಂದುವರೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಫಾರೂಖ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.