ಹೈದರಾಬಾದ್: ಈಗಾಗಲೇ ತೆಲಂಗಾಣ ಸರ್ಕಾರ ತನ್ನ ಶಾಸಕರ, ಎಂಎಲ್ಸಿಗಳ ವೇತನವನ್ನು ಶೇ.400ರಷ್ಟು ಏರಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಆದರೆ ಶಾಸಕರಿಗೆ ಮಾತ್ರ ಇದರಿಂದ ತೃಪ್ತಿಯಾದಂತೆ ಕಾಣುವುದಿಲ್ಲ.
ಇದೀಗ ಶಾಸಕರು ಇನ್ನಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ದೂರದ ನಗರಗಳಿಂದ ಬರುವ ನಮಗೆ ಹೈದಾರಾಬಾದ್ನಲ್ಲಿ ಪ್ಲಾಟ್ ಮತ್ತು ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲದೇ ವಾಹನ ಖರೀದಿಗೆ ಹೆಚ್ಚಿನ ಹಣವನ್ನು ಮಂಜೂರು ಮಾಡಬೇಕು ಎಂದಿದ್ದಾರೆ.
ಇವರ ವೇತನವನ್ನು ಶೇ.೪೦೦ರಷ್ಟು ಏರಿಕೆ ಮಾಡಲು ಮುಂದಾದ ಬಳಿಕ ಅವರ ಬೇಡಿಕೆಗಳ ಪಟ್ಟಿ ಬೆಳೆದಿದೆ. ವೇತನ ಹೆಚ್ಚಳದ ಬಗ್ಗೆ ಅಂತಿಮ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಒಟ್ಟಿನಲ್ಲಿ ಜನಸೇವೆಗೆ ನಿಯೋಜಿತಗೊಂಡ ರಾಜಕಾರಣಿಗಳು ಇದೀಗ ಜನರ ತೆರಿಗೆ ದುಡ್ಡಲ್ಲಿ ದುಂದುವೆಚ್ಚಕ್ಕೆ ಮುಂದಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.