ಕೋಲ್ಕತ್ತಾ: ಭಾರತಕ್ಕೆ ಹತ್ತಿರವಾಗಿದ್ದ ನೇಪಾಳ ಇದೀಗ ಚೀನಾದತ್ತ ವಾಲ ತೊಡಗಿದ್ದು, ಅದರೊಂದಿಗೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.
ಆಹ್ವಾನದ ಮೇರೆಗೆ ಚೀನಾ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಅಲ್ಲಿನ ಪ್ರಧಾನಿ ಲಿ ಕಿಯಾಂಗ್ ಅವರೊಂದಿಗೆ ಮಹತ್ವದ 10 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಚೀನಾ ಮತ್ತು ನೇಪಾಳಕ್ಕೆ ಸಂಪರ್ಕವನ್ನು ಕಲ್ಪಿಸುವ ಮಹತ್ವದ ಸಾರಿಗೆ ಒಪ್ಪಂದಕ್ಕೂ ಇದೇ ವೇಳೆ ಸಹಿ ಹಾಕಲಾಗಿದೆ. ಈ ಮೂಲಕ ಇದುವರೆಗೆ ವಾಣಿಜ್ಯ ವಹಿವಾಟುಗಳಿಗೆ ಭಾರತದ ಬಂದರುಗಳನ್ನು ಅವಲಂಬಿಸಿದ್ದ ನೇಪಾಳ ಇದೀಗ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಿದೆ.
ಕೋಲ್ಕತ್ತಾದ ಹಲ್ದಿಯಾ ಬಂದರಿನ ಬದಲು ಟಿಯಾಂಜಿನ್ ಬಂದರಿನಲ್ಲಿ ವಹಿವಾಟು ನಡೆಸಲು ಅದು ಮುಂದಾಗಿದ್ದು, ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಹಲ್ದಿಯಾ ನೇಪಾಳಕ್ಕೆ 1 ಸಾವಿರ ಕಿ.ಮೀ ದೂರವಿದ್ದರೆ, ಚೀನಾದ ಟಿಯಾಂಜಿನ್ 3 ಸಾವಿರ ಕಿ.ಮೀ ದೂರವಿದೆ. ಈ ಮೂಲಕ ಭಾರತಕ್ಕೆ ಟಾಂಗ್ ಕೊಡಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.