ನವದೆಹಲಿ: ಕೋಲ್ಕತ್ತಾ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ವಿಳಂಬವಾಗಿ ಹೊರಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರು ಏರ್ ಇಂಡಿಯಾ ನನಗೆ ಯಾವ ವಿಶೇಷ ಸವಲತ್ತನ್ನೂ ನೀಡಿಲ್ಲ ಎಂದಿದ್ದಾರೆ.
ಎಐ 701 ಕೋಲ್ಕತ್ತಾ-ದೆಹಲಿ ವಿಮಾನ ಬರೋಬ್ಬರಿ 14 ಗಂಟೆಗಳ ಕಾಳ ತಡವಾಗಿ ಹಾರಾಡಿದೆ. ಇದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಏರ್ ಇಂಡಿಯಾ ಹೇಳಿಕೊಂಡಿತ್ತು.
ಅಲ್ಲದೇ ಅದರೊಳಗಿದ್ದ ಎಲ್ಲಾ ಅತಿಥಿಗಳಿಗೂ ಹೋಟೆಲ್ ಸೌಲಭ್ಯ ಕಲ್ಪಿಸಿಕೊಡಲಾಗಿತ್ತು, ಮಾತ್ರವಲ್ಲ ಸೋಮವಾರ ಬೆಳಿಗ್ಗೆ ವಿಮಾನವನ್ನು ಸಿದ್ಧಪಡಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಆದರೊಳಗಿದ್ದ ಪ್ರಯಾಣಿಕರು ಮಾತ್ರ ನಮಗೆ ಯಾವ ಸವಲತ್ತನ್ನೂ ನೀಡಲಾಗಿಲ್ಲ, ಸೋಮವಾರ 10 ಗಂಟೆಯವರೆಗೂ ನಮಗೆ ವಿಮಾನ ಬಂದಿರಲಿಲ್ಲ ಎಂದಿದ್ದಾರೆ.
ಈ ವೇಳೆ ವಿಮಾನದಲ್ಲಿ ಯೆಚೂರಿ, ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಇದ್ದರು. ಇವರಿಗೆ ವಿಶೇಷ ಸವಲತ್ತು ಸಿಕ್ಕಿತ್ತು ಎಂಬ ಮಾತು ಕೇಳಿ ಬಂದಿದೆ.
ಆದರೆ ಯೆಚೂರಿ ಇದನ್ನು ಅಲ್ಲಗೆಳೆದಿದ್ದು, ವಿಳಂಬಕ್ಕಾಗಿ ಏರ್ ಇಂಡಿಯಾದ ವಿರುದ್ಧ ಹರಿಹಾಯ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.