ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಎಸಿಬಿ ರಚನೆ ಮತ್ತು ಕಾಯಿದೆ ಬಗ್ಗೆ ಚರ್ಚೆ ನಡೆದಿದ್ದು, ಪ್ರತಿ ಪಕ್ಷ ನಾಯಕ ಶೆಟ್ಟರ್ ಮತ್ತು ವಿಧಾನ ಸಭಾ ಮಾಜಿ ಸ್ಪೀಕರ್ ಭೋಪಯ್ಯ ಸರಕಾರ ವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
ಈ ಎಸಿಬಿಯನ್ನು ಕರ್ನಾಟಕ ಲೋಕಾಯಕ್ತ ಕಾಯಿದೆ ಅನ್ವಯ ಮಾಡಲಾಗಿದೆಯೇ ಎಂದು ಪ್ರಶ್ನಿಸಿದಕ್ಕೆ ಜಯಚಂದ್ರ ಅವರು ಉತ್ತರ ನೀಡುತ್ತಾ ಇದನ್ನು ಭ್ರಷ್ಟಾಚಾರ ವಿರೋದಿ ಕಾಯಿದೆಯಡಿಯಲ್ಲಿ ರೂಪಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸರಕಾರ ತರಾಟೆಗೆ ತೆಗೆದುಕೊಂಡು ಮತನಾಡಿದ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ ಎಸಿಬಿ ಎಂಬುದು ಇದು ಕರಪ್ಶನ್ ಪ್ರೋಡಕ್ಷನ್ ಬ್ಯೂರೋ ಎಂದು ಅವರು ಹೇಳಿದಲ್ಲದೇ ಲೋಕಾಯುಕ್ತವನ್ನು ದುರ್ಬಲಗೊಳಿಸಲು ಈ ಕಾಯಿದೆಯನ್ನು ರಚಿಸಲಾಗಿದೆ. ಕೋರ್ಟ್ಗಳು ಸರಕಾರಕ್ಕೆ ಹಲವು ಬಾರಿ ಲೋಕಾಯುಕ್ತವನ್ನು ಬಲಿಷ್ಟಗೊಳಿಸುವಂತೆ ಹೇಳಿದೆ. ಆದರೂ ಸರಕಾರ ಅದನ್ನು ದುರ್ಬಲಗೊಳಿಸುವಲ್ಲಿ ಸರಕಾರ ತೊಡಗಿದೆ.
ಸರಕಾರ ಯಾರೊಂದಿಗೂ ಚರ್ಚಿಸದೇ ಈ ಕಾಯಿದೆಯನ್ನು ಜಾರಿಗೆ ತಂದಿರುವುದು ಸರಕಾರದ ಸರ್ವಾಧಿಕಾರಿ ಧೋರಣಿಗೆ ಕೈಗನ್ನಡಿಯಾಗಿದ್ದು, ಲೋಕಾಯುಕ್ತ ನಿಯಂತ್ರಣಕ್ಕೆ ಈ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಕೆಲವು ಸದಸ್ಯರ ಮೇಲೆ ಪ್ರಕರಣಗಳಿದ್ದು ಅದರಿಂದ ಪಾರಾಗಲು ಇದನ್ನು ರಚಿಸಲಾಗಿದೆ.
ಲೋಕಾಯುಕ್ತ ಬಳಿ ಇರುವ ಕೇಸುಗಳನ್ನು ಎಸಿಬಿಗೆ ಹಸ್ತಾಂತರಿಸಲು ಕಾರಣವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಇದರಿಂದ ಆಡಳಿತ ಮತ್ತು ವಿಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.