ನವದೆಹಲಿ: ಅಗತ್ಯವಿಲ್ಲದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆ ಮಾಡುತ್ತಿರುವ ಪ್ರತಿಪಕ್ಷಗಳ ‘ಕುತಂತ್ರ’ವನ್ನು ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ.
ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಬೇಡದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆಗೆ ಪ್ರಯತ್ನಿಸುತ್ತಿದೆ ಮತ್ತು ಜನರ ಗಮನವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದರು.
ರೈತರ, ಗ್ರಾಮೀಣ ಜನರ ಮುಖದಲ್ಲಿ ನಗುತರಲು ನೀವು ಸಫಲರಾಗಿದ್ದೀರಿ ಎಂದರೆ ನೀವು ಯಶಸ್ವಿಯಾಗಿದ್ದೀರಿ ಎಂದೇ ಅರ್ಥ, ಇದೇ ಅಂತ್ಯದಲ್ಲಿ ಜನರ ಅಭಿಪ್ರಾಯವನ್ನು ರಚಿಸುತ್ತದೆ ಎಂದಿದ್ದಾರೆ.
‘ಋಣಾತ್ಮಕ ಶಕ್ತಿಗಳನ್ನು ದಮನಿಸಿ, ಬೌದ್ಧಿಕ ಸಾಮರ್ಥ್ಯ ಮತ್ತು ವಸ್ತುಸ್ಥಿತಿಯ ನಿರ್ಮಾಣಕ್ಕೆ ಇದು ಅವಶ್ಯಕ’ ಎಂದಿದ್ದಾರೆ.
ನಮ್ಮ ಮಂತ್ರ ಕೇವಲ ’ವಿಕಾಸ, ವಿಕಾಸ ವಿಕಾಸ’ವಾಗಿರಲಿ, ಸರ್ಕಾರದ ಯೋಜನೆಗಳನ್ನು ಕೊನೆಯ ಗ್ರಾಮ, ಕೊನೆಯ ವ್ಯಕ್ತಿಯವರೆಗೂ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.