ಬೆಂಗಳೂರು : ಸಿದ್ದರಾಮಯ್ಯರವರು ಡಿವಿಜಿಯವರ ಮಂಕುತಿಮ್ಮನ ಕಗ್ಗವಾದ ಹಳೆ ಬೇರು ಹೊಸಚಿಗುರು ಕಗ್ಗವನ್ನು ಓದಿ ಬಜೆಟ್ ಗೆ ಚಾಲನೆ ನೀಡಿದರು. ಅಲ್ಲದೇ ರಾಹುಕಾಲದಲ್ಲಿ ಬಜೆಟ್ಗೆ ಚಾಲನೆ ನೀಡಿ ತನ್ನ ಪ್ರಗತಿ ಪರ ಚಿಂತನೆಗೆ ಸಾಕ್ಷಿಯಾದರು. ಅಲ್ಲದೇ ಅವರು ಇದಕ್ಕಾಗಿ ಟೀಕೆಗೂ ಒಳಗಾದರು.
2016-17ನೇ ಸಾಲಿನ ಬಜೆಟ್ ಗಾತ್ರ 1,63,419 ಕೋಟಿ ರೂಪಾಯಿ. 2015 -16ನೇ ಸಾಲಿನ ಸಾಲದ ಮೊತ್ತ 1,76,090 ಕೋಟಿ ರೂಪಾಯಿ. ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ ಸುವರ್ಣ ಕೃಷಿ ಗ್ರಾಮ ಯೋಜನೆ ಆರಂಭ ಮತ್ತು ಈ ಯೋಜನೆಯಡಿ 100 ಮಾದರಿ ಕೃಷಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆ, 25 ಜಿಲ್ಲೆಗಳ 129 ತಾಲೂಕುಗಳಿಗೆ ಕೃಷಿಭಾಗ್ಯ .
ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಗಣಕೀಕರಣಗೊಳ್ಳಲಿದೆ, ಕೃಷಿ ಕ್ಷೇತ್ರಕ್ಕೆ 4, 346 ಕೋಟಿ ಅನುದಾನ, ಚಟ್ನಿ ಪುಡಿ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ. ಭತ್ತ, – ಗೋಧಿಗೆ ತೆರಿಗೆ ವಿನಾಯತಿ, ರಾಗಿ, ಅಕ್ಕಿ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ, ಜೋಳದ ರೊಟ್ಟಿ, ರಾಗಿ ರೊಟ್ಟಿಗೂ ತೆರಿಗೆ ವಿನಾಯಿತಿ. ಹೆಲ್ಮೆಟ್, ಮಲ್ಟಿ ಮೀಡಿಯಾ ಸ್ಪೀಕರ್ಗಳ ತೆರಿಗೆ ಇಳಿಕೆ, ಮದ್ಯದ ಅಬಕಾರಿ ಸುಂಕ ಹೆಚ್ಚಳ, ಮದ್ಯದಂಗಡಿ ಲೈಸೆನ್ಸ್ ದರ ಹೆಚ್ಚಳ, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ, ಏತ ನೀರಾವರಿ ಚಾಲನೆಗೆ ಚಿಂತನೆ.
ಮದರಸಾಗಳ ಆಧುನೀಕರಣಕ್ಕೆ 50 ಕೋಟಿ, ಕ್ರೈಸ್ತ ಸಮುದಾಯ ಭವನಗಳ ಅಭಿವೃದ್ಧಿಗೆ 125 ಕೋಟಿ, ಅಲ್ಪಸಂಖ್ಯಾತರ ಹಜ್ ಯಾತ್ರೆಗೆ 1374ಕೋಟಿ ಅನುದಾನ , ವಿಶ್ವಕನ್ನಡ ಸಮ್ಮೇಳನಕ್ಕೆ 30 ಕೋಟಿ, ರೇಷ್ಮೇ ಇಲಾಖೆಗೆ 367 ಕೋಟಿ ಅನುದಾನ, ಮಲಪ್ರಭಾ ನಾಲೆಗೆ 967 ಕೋಟಿ ಅನುದಾನ, ಎತ್ತಿನಹೊಳೆ ಯೋಜನೆಗೆ ನಿಗಮ, ಶಾಶ್ವತ ನೀರಾವರಿಗೆ ಅಧ್ಯಯನ ಸಮಿತಿ, ರಾಜ್ಯದ ವಿವಿಧೆಡೆ 22 ಕೌಟುಂಬಿಕ ನ್ಯಾಯಾಲಯಗಳ ಸ್ಥಾಪನೆ ಮತ್ತು ಎಲ್ಲಾ ನ್ಯಾಯಾಲಯಗಳಲ್ಲಿ ಕುಡಿಯುವ ನೀರಿನ ಫಟಕ, ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ಡಯಾಲಿಸಿಸ್ ಫಟಕ ಸ್ಥಾಪನೆ, ಕೃಷಿ ವರಮಾನ ತೆರಿಗೆ ರದ್ದು, ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ಹೆಚ್ಚಳ, ಬಿಬಿಎಂಪಿಗೆ 4222 ಕೋಟಿ ಅನುದಾನ, ಧಾರವಾಡದಲ್ಲಿ ಕರ್ನಾಟಕ ವಿವಿ ಸ್ಥಾಪನೆ, 125 ನೇ ವರ್ಷದ ಅಂಬೇಡ್ಕರ್ ಜಯಂತಿ ರಾಜ್ಯಮಟ್ಟದಲ್ಲಿ ಅದ್ದೂರಿಯಾಗಿ ಆಚರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.