ವಾಷಿಂಗ್ಟನ್: ಕಳೆದ 15 ತಿಂಗಳಲ್ಲಿ ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್ ತನ್ನ ಬಹುತೇಕ ಭೂಭಾಗವನ್ನು ಕಳೆದುಕೊಂಡಿದೆ, ಸದ್ಯ ಅದರ ಶಕ್ತಿ ಇಳಿಮುಖವಾಗುತ್ತಿದೆ ಎಂದು ನೂತನ ವರದಿಯೊಂದು ತಿಳಿಸಿದೆ.
ಐಎಚ್ಎಸ್ ಜಾನೆಸ್ 360ಯಲ್ಲಿ ಪ್ರಕಟವಾದ ದಾಖಲೆಗಳ ಪ್ರಕಾರ, 2015ರ ಜನವರಿಯ ಬಳಿಕ ಇಸಿಸ್ ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಶೇ.22ರಷ್ಟು ಭೂಭಾಗವನ್ನು ಕಳೆದುಕೊಂಡಿದೆ. ಕಳೆದ 8 ತಿಂಗಳಲ್ಲೇ ಅದು ಶೇ.8ರಷ್ಟು ಭೂಪ್ರದೇಶವನ್ನು ಕಳೆದುಕೊಂಡಿದೆ.
ಅಮೆರಿಕ ನೇತೃತ್ವದ ಮಿತ್ರ ಪಡೆಗಳು ನಡೆಸುತ್ತಿರುವ ವೈಮಾನಿಕ ದಾಳಿ, ರಷ್ಯಾ ನಡೆಸುತ್ತಿರುವ ಕಾರ್ಯಾಚರಣೆಗಳು ಇಸಿಸ್ ಉಗ್ರರ ಶಕ್ತಿ ಅಡಗಲು ಕಾರಣವಾಗುತ್ತಿದೆ. ಸೇನೆಯ ಕೈಯಿಂದ ಸೋಲು ಕಾಣುತ್ತಿರುವುದರಿಂದ ವಿದೇಶಿ ಯುವಕರನ್ನು ತನ್ನ ಸಂಘಟನೆಗೆ ನಿಯೋಜನೆ ಮಾಡಲು ಕೂಡ ಅದಕ್ಕೆ ಕಷ್ಟವಾಗುತ್ತಿದೆ ಎನ್ನಲಾಗಿದೆ.
ಸಿರಿಯಾ ಗಡಿ ಭಾಗದ ಮೇಲಿನ ಹಿಡಿತವನ್ನು ಕಳೆದುಕೊಂಡ ಹಿನ್ನಲೆಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಾಣೆಯೂ ಅದಕ್ಕೆ ಕಷ್ಟಕರವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.