ಬೆಂಗಳೂರು : ನಾಳೆ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ರಾಜ್ಯದ ಜನರು ರಾಜ್ಯ ಬಜೆಟ್ ಮೇಲೆ ಹಲವು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಾಳೆ ರಾಜ್ಯದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿಯಾದ ಸಿದ್ಧರಾಮಯ್ಯರವರು 10 ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ನೀರಿನ ಸಮಸ್ಯೆ, ವ್ಯವಸಾಯ ಮತ್ತು ಕೃಷಿ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಬರಗಾಲದಿಂದ ರಾಜ್ಯ ತತ್ತರಿಸಿದ್ದು ಸೂಕ್ತವಾಗಿ ಕೇಂದ್ರ ನೀಡಿರುವ ಬರ ಪರಿಹಾರ ನಿಧಿಯನ್ನು ಬಳಸಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ನದಿ ಯೋಜನೆಗಳು, ನದಿ ವಿವಾದ, ಪೊಲೀಸರಿಗೆ ವಸತಿಗೃಹ ನಿರ್ಮಾಣ, ಪೊಲೀಸ್ ಇಲಾಖಾ ಸಿಬ್ಬಂದಿ ಕೊರತೆ ನಿವಾರಣೆ, ಈ ಹಿಂದೆ ಘೋಷಿಸಿರುವ ಪಂಚಾಯತ್ಗಳಿಗೆ ಮೂಲಸೌಕರ್ಯ, ರೈತರ ಹಿತಕಾಯಲು ಸಿಹಿ ನೀರಿನ ನೀರಾಗೆ ಅನುಮತಿ ಮತ್ತು ಅಬಕಾರಿ ಇಲಾಖೆಗೆ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ಸೇರಿದಂತೆ ಪೆಟ್ರೋಲ್ ಮೇಲೆ ಕರಭಾರಗಳು ಅವರಿಗೆ ಸವಾಲಾಗಿ ಪರಿಣಮಿಸಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಈ ಬಾರಿ ಪಂಚಾಯತ್, ವಿಧಾನ ಸಭಾ ಉಪಚುನಾವಣೆಯಿಂದ ಸರಕಾರಕ್ಕೆ ಮುಖಭಂಗವಾಗಿದ್ದು, ಸಿಎಂ ದುಬಾರಿ ವಾಚ್ ಪ್ರಕರಣ ಮತ್ತು ಸಚಿವರ ಹಗರಣಗಳಿಂದ ಸರಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದು ಅದನ್ನು ಸರಿಪಡಿಸಲು ವಿಶೇಷ ಯೋಜನೆಗಳ ಘೋಷಣೆಯಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಸಿಎಂ ಬಜೆಟ್ ಸಿಹಿಯೋ ಕಹಿಯೋ ಎಂದು ನಾಳೆ ರಾಜ್ಯದ ಜನರಿಗೆ ತಿಳಿದು ಬರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.