ಬೈಕೊನೂರ್: ಮಂಗಳ ಗ್ರಹದಲ್ಲಿ ಮಾನವ ಜೀವಗಳ ಅಸ್ತಿತ್ವದ ಕುರಿತ ಅಧ್ಯಯನದ ಅಂಗವಾಗಿ ರಷ್ಯಾ-ಯೂರೋಪ್ ಜಂಟಿ ಕಾರ್ಯಾಚರಣೆಯ ರೋಬೋಟ್ ಬಾಹ್ಯಾಕಾಶ ನೌಕೆ ಉಡಾವಣೆಗೊಂಡಿದೆ.
ರಷ್ಯಾದ ಮಾನವರಹಿತ ಫೋಟಾನ್ ಬಾಹ್ಯಾಕಾಶ ನೌಕೆ ಏಳು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು, ಕಝಕಿಸ್ಥಾನದ ಬೈಕೊನೂರ್ನಿಂದ ಉಡಾವಣೆಗೊಂಡಿದೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೋಸ್ಕೋಮಾಸ್ ಹಾಗೂ ಯೂರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್ಎ) ತಿಳಿಸಿದೆ.
ExoMars-2016, ಇಎಸ್ಎ ಹಾಗೂ ರೋಸ್ಕೋಮಾಸ್ ನಡುವಿನ ಜಂಟಿ ಸಹಯೋಗದ ಎರಡು ಹಂತಗಳ ಪರಿಶೋಧನೆಯ ಮೊದಲ ಹಂತವಾಗಿದೆ. ಮಂಗಳ ಗ್ರಹದಲ್ಲಿ ಜೀವನ ಅಸ್ತಿತ್ವದ ಸಂಶೋಧನೆಯ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಗುರಿ ಹೊಂದಿದೆ ಎಂದು ರೋಸ್ಕೋಮಾಸ್ ತಿಳಿಸಿದೆ.
496 ಮಿಲಿಯನ್ ಕಿಲೋಮೀಟರ್ (308 ಮಿಲಿಯನ್ ಮೈಲು) ಸಂಚರಿಸುವ ಮೂಲಕ ಈ ಟ್ರೇಸ್ ಗ್ಯಾಸ್ ಆರ್ಬಿಟರ್ ಅಕ್ಟೋಬರ್ ತಿಂಗಳಿನಲ್ಲಿ ಮಂಗಳವನ್ನು ಪ್ರವೇಶಿಸಲಿದ್ದು, ಮಂಗಳ ಗ್ರಹದ ಚಿತ್ರಣಗಳನ್ನು ಕಳುಹಿಸಲಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.