ತಿಂಪು: ಒಂದು ದೇಶದ ರಾಜನಿಗೆ ಮಗು ಜನಿಸಿತು ಎಂದರೆ ಡೋಲು ವಾದ್ಯಗಳನ್ನು ಬಾರಿಸಿ, ಸಿಡಿಮದ್ದುಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಆದರೆ ಭೂತಾನ್ ಜನತೆ ಮಾತ್ರ ಅತೀ ವಿಶೇಷವಾಗಿ ತಮ್ಮ ನೂತನ ರಾಜಕುಮಾರನಿಗೆ ಸ್ವಾಗತ ಕೋರಿದ್ದಾರೆ.
ಹಿಮಾಲಯದ ತಪ್ಪಲಿನ ಭೂತಾನ್ನ ರಾಜನಿಗೆ ರಾಜಕುಮಾರ ಜನಿಸಿದ್ದು, ಈ ರಾಜಕುಮಾರನನ್ನು ಈ ಜಗತ್ತಿಗೆ ಸ್ವಾಗತಿಸಲು ಅಲ್ಲಿನ ಜನತೆ 108,000 ಸಸಿಗಳನ್ನು ನೆಟ್ಟಿದ್ದಾರೆ. ಈ ಮೂಲಕ ಪರಿಸರ ಕಾಳಜಿಯನ್ನು ಮರೆದಿದ್ದಾರೆ ಮಾತ್ರವಲ್ಲ ರಾಜಕುಮಾರ ಭವಿಷ್ಯದಲ್ಲಿ ಹಚ್ಚ ಹಸಿರು ಪ್ರಕೃತಿಯಲ್ಲಿ ಬದುಕಲಿ ಎಂಬ ಆರ್ಶಿವಾದವನ್ನೂ ಮಾಡಿದ್ದಾರೆ.
ಭೂತಾನ್ ಪ್ರಧಾನಿ, ವಿರೋಧ ಪಕ್ಷದ ನಾಯಕರು ಕೂಡ ಗಿಡ ನೆಡುವ ಸ್ವಯಂಸೇವಕರ ಜೊತೆ ಸೇರಿ ಗಿಡಗಳನ್ನು ನೆಟ್ಟಿದ್ದಾರೆ. ಈ ಮೂಲಕ ತಮ್ಮ ರಾಜನಿಗೆ ಅಪೂರ್ವ ಉಡುಗೊರೆ ನೀಡಿದ್ದಾರೆ.
ರಾಜ ಕೇಸರ್ ಮತ್ತು ರಾಣಿ ಪೆಮಾರಿಗೆ ಫೆ.5,2016ರಂದು ಮಗು ಜನಿಸಿದೆ. ಆರೋಗ್ಯ, ಸೌಂದರ್ಯ ಮತ್ತು ಸಾಂಗತ್ಯವನ್ನು ನಿಡುವ ಮರವನ್ನು ಬುದ್ಧ ಧರ್ಮದಲ್ಲಿ ಪವಿತ್ರ ಎಂದು ನಂಬಲಾಗುತ್ತದೆ. ಇದೇ ಕಾರಣದಿಂದ ಅಲ್ಲಿನ ಜನತೆ ರಾಜಕುಮಾರನಿಗೆ ಉಡುಗೊರೆಯಾಗಿ ಸಸಿ ನೆಡುತ್ತಿದ್ದಾರೆ.
ಸಸಿ ನೆಡುವ ಕಾರ್ಯ ಮಾ.6ರಿಂದ ಆರಂಭವಾಗಿದೆ, 82ಸಾವಿರ ಸಸಿಗಳನ್ನು ಆಯಾಯ ಮನೆಯವರು ನೆಟ್ಟರೆ, ಉಳಿದ 26000 ಸಸಿಗಳನ್ನು ಸ್ವಯಂ ಸೇವಕರು ನೆಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.