ವಾಷಿಂಗ್ಟನ್: ಹವಾಮಾನ ಬದಲಾವಣೆ ಕುರಿತ ದ್ವಿಪಕ್ಷೀಯ ಸಹಕಾರ ಮುಂದುವರೆಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೇರಿಕ ಫುಲ್ಬ್ರೈಟ್-ಕಲಾಂ ಹವಾಮಾನ ಸಹಭಾಗಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಭಾರತೀಯ ಸಂಶೋಧಕರಿಗೆ ಅಮೇರಿಕದ ಸಂಸ್ಥೆಗಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಅಮೇರಿಕ ಸರ್ಕಾರ ಜಂಟಿಯಾಗಿ ಹೂಡಿಕೆ ಮಾಡಿದ ಈ ಯೋಜನೆಯ ಮೊದಲ ಹಂತದಲ್ಲಿ ೬ ಭಾರತೀಯ ಡಾಕ್ಟರ್ಗಳು ಮತ್ತು ಪಿಎಚ್ಡಿ ವಿದ್ಯಾರ್ಥಿಗಳು ಅಮೇರಿಕದ ಅಮೇರಿಕದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ.
ಹವಾಮಾನ ಸಂಬಂಧಿತ ದೀರ್ಘ ಕಾಲದ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸಲು ಎರಡೂ ಸರ್ಕಾರಗಳು ಬದ್ಧವಾಗಿವೆ. ಈ ಸಹಭಾಗಿತ್ವಕೆ ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಾಗಿದೆ.
ಎರಡು ರಾಷ್ಟ್ರಗಳ ಪ್ರತಿಷ್ಠಿತ ಫುಲ್ಬ್ರೈಟ್ ಯೋಜನೆ ಅಡಿ ಭಾರತ-ಅಮೇರಿಕ ಶೈಕ್ಷಣಿಕ ಪ್ರತಿಷ್ಠಾನ (USIEF) ಈ ಕಾರ್ಯಯೋಜನೆಯನ್ನು ನಿರ್ವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.