ವಾಷಿಂಗ್ಟನ್: ಮೈಕ್ರೋಸಾಫ್ಟ್ನ ಸಿಇಓ ಭಾರತೀಯ ಮೂಲದ ಸತ್ಯಾ ನಡೆಲ್ಲಾ ಅವರಿಗೆ ‘ಚಾಂಪಿಯನ್ ಆಫ್ ಚೇಂಜ್’ ಬಿರುದನ್ನು ನೀಡಿ ಗೌರವಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಯೋಗಸ್ಥ ಕುಟುಂಬಕ್ಕೆ ಸಹಕಾರಿಯಾಗುವಂತೆ ತಮ್ಮ ಕಂಪನಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವುದಕ್ಕಾಗಿ ನಡೆಲ್ಲಾ ಅವರನ್ನು ಗೌರವಿಸಲು ಅಧ್ಯಕ್ಷರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
1992ರಲ್ಲಿ ಮೈಕ್ರೋಸಾಫ್ಟ್ ಕಂಪನಿ ಸೇರಿದ್ದ ನಡೆಲ್ಲಾ ಅವರು ತಮ್ಮ ನಾಯಕತ್ವ ಗುಣದಿಂದಾಗಿ ಉನ್ನತ ಸ್ಥಾನಕ್ಕೆ ಏರಿದವರು. 2014ರ ಫೆಬ್ರವರಿಯಲ್ಲಿ ಇವರು ಸಿಇಓ ಆಗಿ ಆಯ್ಕೆಯಾದರು.
ಹೈದರಾಬಾದ್ ಮೂಲದವರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರೀಕಲ್ ಎಂಜಿನಿಯರಿಂಗ್ನಲ್ಲಿ ಪದವಿಯನ್ನು ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.