ನವದೆಹಲಿ: ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ತನ್ನ ಸಂಸ್ಥೆಯ 35ನೇ ವರ್ಷದ ಅಂಗವಾಗಿ ಬೃಹತ್ ವರ್ಲ್ಡ್ ಕಲ್ಚರ್ ಫೆಸ್ಟಿವಲ್ 2016ನ್ನು ಆಯೋಜನೆ ಮಾಡುತ್ತಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿ ತಟದಲ್ಲಿ ಮಾ.11ರಿಂದ 13ರವರೆಗೆ ಈ ಸಮಾರಂಭ ನಡೆಯಲಿದ್ದು, ದೇಶ ವಿದೇಶಗಳ 3.5 ಮಿಲಿಯನ್ ಜನರು ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
1000 ಎಕರೆಗಳ ವಿಶಾಲ ವಿಸ್ತೀರ್ಣದಲ್ಲಿ ಆಟ್ ಆಫ್ ಲಿವಿಂಗ್ ಮತ್ತು ವರ್ಲ್ಡ್ ಫೋರಂ ಆಫ್ ಎಥಿಕ್ಸ್ ಇನ್ ಬ್ಯುಸಿನೆಸ್ ಈ ಸಮಾರಂಭವನ್ನು ಜಂಟಿಯಾಗಿ ಆಯೋಜನೆ ಮಾಡುತ್ತಿದ್ದು, ಅದಕ್ಕೆ ಸಿದ್ಧತೆಗಳು ಆರಂಭಗೊಂಡಿದೆ.
ವೇದಿಕೆಯ 7 ಎಕರೆ ವಿಸ್ತೀರ್ಣದಲ್ಲಿ ಇರಲಿದ್ದು, ಗಿನ್ನಿಸ್ ದಾಖಲೆ ಸೇರುವ ಸಾಧ್ಯತೆ ಇದೆ. 20 ಸಾವಿರ ಅಂತಾರಾಷ್ಟ್ರೀಯ ಅತಿಥಿಗಳು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.