ನವದೆಹಲಿ: ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಕ್ಕೆ ಚುನಾವಣಾ ಆಯೋಗ ಶುಕ್ರವಾರ ಚುನಾವಣಾ ದಿನಾಂಕವನ್ನು ಪ್ರಕಟಗೊಳಿಸಿದೆ.
ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮಬಂಗಾಳ ಮತ್ತು ಪುದುಚೇರಿಗೆ ಚುನಾವಣಾ ದಿನಾಂಕ ನಿಗಧಿಯಾಗಿದ್ದು, ಇಂದಿನಿಂದಲೇ ಅಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ.
ಅಸ್ಸಾಂ: 126 ಸ್ಥಾನಗಳುಳ್ಳ ಅಸ್ಸಾಂಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಎಪ್ರಿಲ್.4ರಂದು ಮೊದಲ ಹಂತ, ಎಪ್ರಿಲ್ 11ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
ಪಶ್ವಿಮಬಂಗಾಳ: 294 ವಿಧಾನಸಭಾ ಸ್ಥಾನಗಳುಳ್ಳು ಇಲ್ಲಿ ಆರು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಎ.4 ಮತ್ತು ಎ.11ರಂದು ಎರಡು ಹಂತದಲ್ಲಿ ನಡೆಯಲಿದೆ, ಎರಡನೇ ಹಂತ ಎ.17ರಂದು, ಮೂರನೇ ಹಂತ ಎ.21ರಂದು, 4ನೇ ಹಂತ ಎ.25ರಂದು, 5ನೇ ಹಂತ ಎ.30ರಂದು, ಆರನೇ ಹಂತ ಮೇ.5ರಂದು ನಡೆಯಲಿದೆ.
ಮೇ.16ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ.
ಎಲ್ಲಾ ರಾಜ್ಯಗಳ ಫಲಿತಾಂಶಗಳು ಮೇ.19 ಕ್ಕೆ ಬಿಡುಗಡೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.