×
Home About Us Advertise With s Contact Us

ವಿಶ್ವಕಪ್ ಫೈನಲ್‌ಗೆ ನ್ಯೂಜಿಲ್ಯಾಂಡ್

newszeಅಕ್ಲಂಡ್: ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇದೇ ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 43 ಓವರ್‌ಗಳಲ್ಲಿ 281 ರನ್ ಪೇರಿಸಿತು.

೩೮ನೇ ಓವರ್ ಪೂರ್ಣಗೊಂಡ ಬೆನ್ನಲ್ಲೇ, ಮಳೆ ಆರಂಭವಾಗಿತ್ತು. ಹೀಗಾಗಿ, ಪಂದ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತ್ತು. ಮಳೆಯ ಪ್ರತಿಕೂಲ ಹವಾಮಾನದ ಕಾರಣ ‘ಡಕ್ ವರ್ಥ್ /ಲಿವ್ಸ್ ಮೆಥೆಡ್’ ಆಧಾರದ ಮೇಲೆ ನ್ಯೂಜಿಲೆಂಡ್ ಗೆ 298 ರನ್ ಗಳ ಗುರಿ ನೀಡಲಾಯಿತು.

ಈ ಗುರಿಯ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡ 43 ಓವರ್‌ಗಳಲ್ಲಿ 299 ರನ್ ಪೇರಿಸಿ ಗೆಲುವಿನ ನಗಾರಿ ಬಾರಿಸಿತು.ನ್ಯೂಜಿಲ್ಯಾಂಡ್ ಪರ ಗ್ರ್ಯಾಂಡ್ ಎಲಿಯೆಟ್ 84, ಬ್ರೆಂಡನ್ ಮೆಕಾಲಂ 59, ಕೋರೆ ಆಂಡರ್‌ಸನ್ 58 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ನ್ಯೂಜಿಲ್ಯಾಂಡ್ ತಂಡ ಇತಿಹಾಸ ಬರೆದಿದೆ.

ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

 

Recent News

Back To Top
error: Content is protected !!