ನವದೆಹಲಿ: ಪ್ರತಿವರ್ಷ 25-40 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಸತತ ಎರಡನೇ ವರ್ಷವೂ ಪಾತ್ರವಾಗಿದೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
‘ಇಂದಿರಾ ಗಾಂಧಿ ವಿಮಾನನಿಲ್ದಾಣದ ಪಾಟ್ನರ್ಗಳು, ಸಿಬ್ಬಂದಿಗಳು ಅವಿರತ ಶ್ರಮಿಸಿ ನಮ್ಮ ಪ್ರಯಾಣಿಕರಿಗೆ ಅಮೋಘ ಅನುಭವವನ್ನು ನೀಡಿದ್ದಾರೆ, ಇದರಿಂದಾಗಿ ಮೂರು ಪ್ರತಿಷ್ಠಿತ ಅವಾರ್ಡ್ ಜಯಿಸಲು ಸಾಧ್ಯವಾಯಿತು’ ಎಂದು ವಿಮಾನನಿಲ್ದಾಣದ ಸಿಇಓ ಪ್ರಭಾಕರ ರಾವ್ ತಿಳಿಸಿದ್ದಾರೆ.
ನಾವು ಎರಡನೇ ಬಾರಿಗೆ ವಿಶ್ವ.ನಂ.1 ಸ್ಥಾನ ಪಡೆದಿದ್ದೇವೆ, ಸೈಝ್ ಆಂಡ್ ರೀಜನ್-ಏಷ್ಯಾ ಪಿಸಿಫಿಕ್ ಬೆಸ್ಟ್ ಏರ್ಪೋರ್ಟ್, ರೀಜನ್-ಏಷ್ಯಾ ಪೆಸಿಫಿಕ್ನ ಉತ್ತಮ ಏರ್ಪೋರ್ಟ್ ಪ್ರಶಸ್ತಿಗಳು ದೊರೆತಿದೆ.
ರ್ಯಾಂಕಿಂಗ್ನ್ನು ಎಸಿಐ ಘೋಷಣೆ ಮಾಡಿದ್ದು, ಇದು ವಿಶ್ವದ ಏರ್ಪೋರ್ಟ್ನ ಟ್ರೇಡ್ ಅಸೋಸಿಯೇಶನ್.
ಇಂದಿರಾ ಗಾಂಧಿ ವಿಮಾನ ನಿಲ್ದಾಣವೂ ಪ್ರತಿ ದಿನ ಸಾಮಾನ್ಯವಾಗಿ 958 ವಿಮಾನಗಳನ್ನು ಮತ್ತು 760ಸಾವಿರ ಟನ್ ಕಾರ್ಗೋಗಳನ್ನು ನಿಭಾಯಿಸುತ್ತದೆ. ಏರ್ ಇಂಡಿಯಾ, ಇಂಡಿಗೋ, ವಿಸ್ತಾರ, ಸ್ಪೈಸ್ ಜೆಟ್ ಇದನ್ನು ತನ್ನ ಹಬ್ ಆಗಿ ಬಳಕೆ ಮಾಡುತ್ತಿದೆ.
ಈ ವಿಮಾನ ನಿಲ್ದಾಣ ಜಿಎಂಆರ್ ಕಂಪನಿ, ಏರ್ಪೋರ್ಟ್ ಅಥಾರಿಟಿ ಆರ್ಫ ಇಂಡಿಯಾ, ಫ್ರಾಪೋರ್ಟ್ನ ಜಾಯಿಂಟ್ ವೆಂಚರ್. ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಕಳೆದ 30 ವರ್ಷದಿಂದ ಇದನ್ನು ಅಭಿವೃದ್ಧಿ, ವಿನ್ಯಾಸ, ಹಣಕಾಸು, ನಿಭಾಯಿಸಲಾಗುತ್ತಿದೆ.
ಇದು 58ದೇಶೀಯ, 62 ಅಂತಾರಾಷ್ಟ್ರೀಯ, 57 ವಿದೇಶಿ ಏರ್ಲೈನ್ಸ್ಗಳ ಗೇಟ್ ವೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.