ನವದೆಹಲಿ: ಇಶ್ರತ್ ಜಹಾನ್ಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಗೃಹಸಚಿವಾಲಯ ಮುಂದಾಗಿದೆ.
ಇಶ್ರತ್ ಮತ್ತು ಆಕೆಯೊಂದಿಗೆ ಇದ್ದ ಸಹಚರರು ಲಷ್ಕರ್-ಇ-ತೋಯ್ಬಾ ಕಾರ್ಯಕರ್ತರು ಎಂದು ಇದ್ದ ಒರಿಜಿನಲ್ ಅಫಿಡವಿಟ್ನ್ನು ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರು ತಿರುಚಿದ್ದರು ಎಂದು ಮಾಜಿ ಗೃಹಸಚಿವ ಜಿಕೆ ಪಿಳ್ಳೈ ಅವರು ಹೇಳಿಕೆ ನೀಡಿದ ಹಿನ್ನಲೆಯಲ್ಲಿ ದಾಖಲೆಗಳ ಪರಿಶೀಲನೆಗೆ ಗೃಹಸಚಿವಾಲಯ ಮುಂದಾಗಿದೆ.
‘ಇಶ್ರತ್ ಜಹಾನ್ ಫೈಲ್ಗಳಿರುವ ಸ್ಥಳವನ್ನು ಪತ್ತೆ ಮಾಡುತ್ತಿದ್ದೇವೆ, ಈ ಫೈಲ್ಗಳು ಇನ್ನಷ್ಟೇ ಟ್ರೇಸ್ ಆಗಬೇಕಾಗಿದೆ’ ಎಂದು ಗೃಹಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇಶ್ರತ್ ಪ್ರಕರಣದ ಬಗ್ಗೆ ಹೊಸ ಹೇಳಿಕೆಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅದಕ್ಕೆ ಸಂಬಂಧಪಟ್ಟ ಫೈಲ್ಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
2009ರಲ್ಲಿ ಎರಡು ತಿಂಗಳ ಅಂತರದಲ್ಲಿ ಇಶ್ರತ್ಗೆ ಸಂಬಂಧಪಟ್ಟ ಎರಡು ಅಫಿಡವಿಟ್ನ್ನು ಯುಪಿಎ ಸರ್ಕಾರ ಸುಪ್ರೀಂಗೆ ಸಲ್ಲಿಸಿತ್ತು. ಮೊದಲ ಅಫಿಡವಿಟ್ನಲ್ಲಿ ಇಶ್ರತ್ ಮತ್ತು ಆಕೆಯ ಸಂಗಡಿಗರು ಲಷ್ಕರ್ ಕಾರ್ಯಕರ್ತರು ಎಂದಿತ್ತು, ಎರಡನೇ ಅಫಿಡವಿಟ್ನಲ್ಲಿ ಅದಕ್ಕೆ ಸಾಕ್ಷಿಯಿಲ್ಲ ಎಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.