ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಸಂಸತ್ತಿನಲ್ಲಿ ಬಹುನಿರೀಕ್ಷೆಯ ಬಜೆಟ್ನ್ನು ಮಂಡಿಸಿದರು. ಇದು ಅವರು ಮಂಡಿಸಿದ ಮೂರನೇ ಬಜೆಟ್ ಆಗಿದೆ.
ವಿಶ್ವ ಆರ್ಥಿಕತೆ ಸಂಕಷ್ಟದಲ್ಲಿದೆ, ಇಂತಹ ವೇಳೆ ನಾವು ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಭಾರತದ ಆರ್ಥಿಕತೆ ಸ್ಥಿರವಾಗಿದ್ದು, ನಮ್ಮ ಬಗ್ಗೆ ವಿಶ್ವ ಆಶಾವಾದವನ್ನು ಇಟ್ಟುಕೊಂಡಿದೆ ಎಂದರು.
ಭಾರತದ ವಿಶ್ವ ಆರ್ಥಿಕತೆಯ ಆಶಾಕಿರಣ ಎಂದು ಐಎಂಎಫ್ ಕೊಂಡಾಡಿದೆ. ವಿಶ್ವ ಮಾರುಕಟ್ಟೆಯ ಪ್ರಗತಿಯ ದರ ಕುಸಿತಗೊಂಡಿದೆ. ಅಸಹಕಾರದ ರಾಜಕೀಯದ ನಡುವೆಯೂ ನಾವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ.
ಸಾಕಷ್ಟು ಸವಾಲುಗಳು ನಮ್ಮ ಮುಂದೆ ಇದೆ. ಈ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ಈ ವರ್ಷ ದೇಶದಲ್ಲಿ ಶೇ.13ರಷ್ಟು ಮನ್ಸೂನ್ ಕೊರತೆಯಾಗಿದೆ. ನಮ್ಮ ಜಿಡಿಪಿ ಶೇ.7.6ಕ್ಕೆ ಹೆಚ್ಚಳವಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸ್ರಷ್ಟಿಗೆ ಹೆಚ್ಚಿನ ಒತ್ತು ನಿಡುತ್ತಿದ್ದೇವೆ, ಸಾಮಾಜಿಕ ವಲಯ, ಆರೋಗ್ಯ ವಲಯಕ್ಕೆ ಹೆಚ್ಚಿನ ಗಮನ ಕೊಡಲಿದ್ದೇವೆ ಎಂದರು.
ಹಣದುಬ್ಬರದ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.