ನವದೆಹಲಿ: ರೈಲು ಪ್ರಯಾಣಿಕರಲ್ಲಿ ಹೆಚ್ಚಿನವರು ದುಬಾರಿ ಬೆಲೆ ತೆತ್ತು ಎಸಿ ಬೋಗಿಯಲ್ಲೇ ಪ್ರಯಾಣಿಸುತ್ತಾರೆ. ನೆಮ್ಮದಿಯ ನಿದ್ದೆ, ಕಿರಿ ಕಿರಿಯಿಲ್ಲದೆ ಪ್ರಯಾಣ ಮಾಡಬಹುದು ಎಂಬ ಆಲೋಚನೆ ಇವರದ್ದು.
ಆದರೆ ಇನ್ನು ಮುಂದೆ ಹೊದಿಕೆ ಹೊದಿಸಿಕೊಂಡು ಹಾಯಾಗಿ ಮಲಗಿ ಎಸಿ ಬೋಗಿಯಲ್ಲಿ ಪ್ರಯಾಣಿಸಲು ನಿರ್ಧರಿಸುವವರು ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಏಕೆಂದರೆ ಎಸಿ ಬೋಗಿಯಲ್ಲಿನ ಹೊದಿಕೆಗಳನ್ನು, ಒಗೆಯಲಾಗುತ್ತದೆ ಎಂಬ ಅಂಶವನ್ನು ಸ್ವತಃ ರೈಲ್ವೇ ಖಾತೆ ಸಹಾಯಕ ಸಚಿವರೇ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮನೋಜ್ ಸಿನ್ಹಾ, ಎಸಿ ಬೋಗಿಯಲ್ಲಿರುವ ಬೆಡ್ಶಿಟ್, ದಿಂಬು ಕವರ್, ಬೆಡ್ ರೋಲ್ಗಳನ್ನು ದಿನಾಲು ಒಗೆಯಲಾಗುತ್ತದೆ. ಆದರೆ ಹೊದಿಕೆಯನ್ನು ಎರಡು ತಿಂಗಳಿಗೊಮ್ಮೆ ಒಗೆಯಲಾಗುತ್ತದೆ ಎಂದಿದ್ದಾರೆ.
ಸದ್ಯಕ್ಕೆ ರೈಲ್ವೇಯಲ್ಲಿ ೧೪ ಲಾಂಡ್ರಿಗಳಿವೆ, ಮುಂದಿನ ದಿನಗಳಲ್ಲಿ ಅದನ್ನು 24ಕ್ಕೆ ಏರಿಸಲಿದ್ದೇವೆ ಎಂದರು.
ಪ್ರಯಾಣಿಕರು ತಾವೇ ಸ್ವತಃ ರಗ್ಗು, ಹೊದಿಕೆಗಳನ್ನು ಮಲಗಲು ತಂದರೂ ಅಡ್ಡಿಯಿಲ್ಲ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.