ನವದೆಹಲಿ: ಭಾರತದಲ್ಲಿ ಹಾಲು ಉತ್ಪಾದನೆ ಹೆಚ್ಚಳಗೊಂಡಿದ್ದು, ಜಗತ್ತಲ್ಲೇ ಅತೀ ಹೆಚ್ಚು ಹಾಲು ಉತ್ಪಾದಿಸುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಗತ್ತಿನ ಒಟ್ಟು ಹಾಲು ಉತ್ಪಾದನೆಯ ಶೇ.18.5ರಷ್ಟು ಭಾರತದಲ್ಲೇ ಉತ್ಪಾದನೆಯಾಗುತ್ತದೆ. 2014-15 ನೇ ಸಾಲಿನಲ್ಲಿ 146.3 ಮಿಲಿಯನ್ ಟನ್ ಔಟ್ಪುಟ್ ಸಿಕ್ಕಿದೆ, 2013-14ರಲ್ಲಿ ಇದು 137.69 ಟನ್ ಆಗಿತ್ತು. ಒಟಟು ಶೇ.6.26 ರಷ್ಟು ಪ್ರಗತಿಯನ್ನು ಕಂಡಿದೆ.
ಶುಕ್ರವಾರ ಅರುಣ್ ಜೇಟ್ಲಿಯವರು ಸದನದಲ್ಲಿ ಪ್ರಸ್ತುಪಡಿಸಿದ ಆರ್ಥಿಕ ಸಮೀಕ್ಷೆಯಿಂದ ಈ ಅಂಶ ಸ್ಪಷ್ಟವಾಗಿದೆ.
ಫುಟ್ ಆಂಡ್ ಅಗ್ರಿಕಲ್ಚರ್ ಆರ್ಗನೈಝೇಶನ್ ವರದಿಯ ಪ್ರಕಾರ, ಜಗತ್ತಿನ ಹಾಲು ಉತ್ಪಾದನೆಯಲ್ಲಿ ಶೇ. 3.1 ರಷ್ಟು ಹೆಚ್ಚಳವಾಗಿದೆ, 2013 ರಲ್ಲಿ 765 ಮಿಲಿಯನ್ ಹಾಲು ಉತ್ಪಾದನೆಯಾಗಿದ್ದಾರೆ, 2014 ರಲ್ಲಿ 789 ಮಿಲಿಯನ್ ಹಾಲು ಉತ್ಪಾದನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.