ಮಥುರಾ: ಬಿಜೆಪಿ ಯುವಮೋರ್ಚಾದ ಮುಖ್ಯಸ್ಥ ಮತ್ತು ಸಂಸದ ಅನುರಾಗ್ ಠಾಕೂರ್ ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಉಗ್ರನೇ ಅಥವಾ ಅಲ್ಲವೇ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಅಫ್ಜಲ್ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಾಗಿಲ್ಲ ಎಂದು ಮಾಜಿ ಸಚಿವ ಪಿ.ಚಿದಂಬರಂ ಅವರು ಹೇಳಿದ್ದಾರೆ. ಅವರ ನಿಲುವನ್ನು ಕಾಂಗ್ರೆಸ್ ಸಮರ್ಥಿಸುತ್ತದೆಯೇ ಎಂದು ಅನುರಾಗ್ ಪ್ರಶ್ನಿಸಿದ್ದಾರೆ.
2011ರಲ್ಲಿ ಅಫ್ಜಲ್ ಕ್ಷಮಾಧಾನ ಅರ್ಜಿ ತಿರಸ್ಕೃತಗೊಂಡಾಗ ಗೃಹಸಚಿವರಾಗಿದ್ದವರು ಯಾರು? ಅದನ್ನು ತಡೆಯಲು ಅವರು ಏನು ಮಾಡಿದರು? ಎಂದು ಪ್ರಶ್ನಿಸಿದ್ದಾರೆ.
ಅಫ್ಜಲ್ ಉಗ್ರ ಎಂಬುದನ್ನು ಕಾಂಗ್ರೆಸ್ ನಂಬುದಿಲ್ಲವೇ? ಆತನನ್ನು ಹುತಾತ್ಮ ಎನ್ನುವ ಜನರಿಗೆ ರಾಹುಲ್ ಸದಾ ಬೆಂಬಲಿಸುತ್ತಿದ್ದಾರೆ, ಹೀಗಾಗೀ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಜೆಎನ್ಯುನಲ್ಲಿ ಮಾವೋವಾದಿ, ನಕ್ಸಲರಿಗೆ ಬೆಂಬಲ ನೀಡುವ ವಿದ್ಯಾರ್ಥಿಗಳು, ಭಯೋತ್ಪಾದಕರನ್ನು ಹುತಾತ್ಮರೆನ್ನುವ ವಿದ್ಯಾರ್ಥಿಗಳು ಮಾತ್ರ ಇಲ್ಲ, ಹೀಗಾಗಿ ಇಡೀ ಜೆಎನ್ಯುವನ್ನು ತೆಗಳುವುದು ಸರಿಯಲ್ಲ ಎಂದಿರುವ ಅವರು, ಆದರೆ ಯಾರು ದೇಶದ ಬಗ್ಗೆ ಕಟ್ಟದಾಗಿ ಮಾತನಾಡುತ್ತಾರೋ ಅವರು ದೇಶದಲ್ಲಿ ಇರಬಾರದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.