ಕೊಚ್ಚಿ; ಭಾರತೀಯ ದಂಡ ಸಂಹಿತೆಗೆ ಪರಿಷ್ಕರಣೆ ತರುವ ಅಗತ್ಯವಿದೆ, ಈಗಲೂ ಇದರಲ್ಲಿನ ಬಹುತೇಕ ಅಂಶಗಳನ್ನು ಬ್ರಿಟಿಷರು ರಚಿಸಿದ್ದಾರೆ. 21ನೇ ಶತಮಾನಕ್ಕೆ ತಕ್ಕಂತೆ ಇದಕ್ಕೆ ಬದಲಾವಣೆಗಳನ್ನು ತರಬೇಕಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರತಿಪಾದಿಸಿದ್ದಾರೆ.
ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ದಂಡ ಸಂಹಿತೆಯ 155ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ದಂಡ ಸಂಹಿತೆ ಅಪರಾಧ ಕಾನೂನಿನ ಪ್ರೀಮಿಯರ್ ಕೋಡ್ ಆಗಿದ್ದು, ಶಾಸಕಾಂಗದ ಮಾಡೆಲ್ ಪೀಸ್ ಆಗಿದೆ ಎಂಬುದರಲ್ಲಿ ಅನುಮಾನವಿಲ್ಲ, ಆದರೆ 21ನೇ ಶತಮಾನದ ಬದಲಾದ ಅಗತ್ಯತೆಗಳಿಗೆ ತಕ್ಕಂತೆ ಇದನ್ನು ಪರಿಷ್ಕರಿಸುವ ಅಗತ್ಯವಿದೆ ಎಂದಿದ್ದಾರೆ.
ಇದರಲ್ಲಿ ಕೇವಲ ಹಳೆಯ ಅಪರಾಧಗಳಿವೆ, ಹೊಸದಾಗಿ ಹುಟ್ಟಿಕೊಂಡಿರುವ ಅಪರಾಧಗಳು ಇದಕ್ಕೆ ಸೇರ್ಪಡೆಗೊಂಡಿಲ್ಲ, ಅಂತಹ ಅಪರಾಧಗಳನ್ನು ದಂಡ ಸಂಹಿತೆಗೆ ಸೇರಿಸಿ ಅವುಗಳಿಗೆ ಹೊಸ ವ್ಯಾಖ್ಯಾನ ನೀಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.