ನಾಗ್ಪುರ: ರಾಷ್ಟ್ರ ವಿರೋಧಿ ಚಟುವಟಿಕೆಗಳಿಂದ ದೂರವಿರುವಂತೆ ಸಿಯಾಚಿನ್ ಹುತಾತ್ಮ ಹನುಮಂತಪ್ಪರವರ ಪತ್ನಿ ಮಹಾದೇವಿ ದೇಶದ ಯುವಜನತೆಗೆ ಕರೆ ನೀಡಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಕಾರ್ಯಗಳು ನನಗೆ ಅತೀವ ದುಃಖ ತಂದಿದೆ, ಯುವಕರು ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಲು ಸದಾ ಸಿದ್ಧರಿರಬೇಕು ಎಂದರು.
ನಾವು ಭಾರತದಲ್ಲಿ ಜನಿಸಿದ್ದೇವೆ, ಭಾರತ ಮಾತೆ ನಮಗಿಲ್ಲಿ ಜಾಗ ನೀಡಿದ್ದಾಳೆ. ಆದರೆ ಇದನ್ನು ನಾವು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
‘ನನಗೆ ಮಗನಿಲ್ಲ, ಮಗಳನ್ನು ಮಗನಂತೆ ಬೆಳೆಸಿ ಭಾರತೀಯ ಸೇನೆಗೆ ಕಳುಹಿಸುತ್ತೇನೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.