ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ 68ನೇ ಜನ್ಮದಿನಾಚರಣೆ ಅಂಗವಾಗಿ ಆಲ್ ಇಂಡಿಯಾ ಅನ್ನಾ ದ್ರಾವಿಡ ಮುನ್ನೇತ್ರ ಕಝಗಮ್ ಪಕ್ಷದ ಕಾರ್ಯಕರ್ತರು ತಮ್ಮ ಕೈಗಳಿಗೆ ಅಮ್ಮ ಅವರ ಟ್ಯಾಟೂ ಹಚ್ಚಿ ಸಂಭ್ರಮಿಸಿದರು.
ಇವು ’ನಮಗೆ ಅಮ್ಮ ಎಲ್ಲವೂ’ (Amma everything for us) ಎಂದು ಸೂಚಿಸುವ ಟ್ಯಾಟೂಗಳಾಗಿವೆ.
ಈ ಮಧ್ಯೆ ಪಕ್ಷದ ಸದಸ್ಯರು ಪ್ರಧಾನ ಕಚೇರಿಯಲ್ಲಿ ಅಮ್ಮ ಅವರ ಹುಟ್ಟು ಹಬ್ಬವನ್ನು ಆಚರಿಸಿದರು. ನಮಗೆ ಅಮ್ಮ ಎಲ್ಲವೂ. ಅವರು ನಮಗೆ ದೇವರಂತೆ. ಪ್ರವಾಹ ಸಂದರ್ಭದಲ್ಲಿ 5000 ರೂ. ಪರಿಹಾರ ನೀಡುವ ಮೂಲಕ ನಮಗೆ ಸಹಕರಿಸಿದರು. ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಕೈಗಳಿಗೆ ಅಮ್ಮ ಅವರ ಟ್ಯಾಟೂ ಹಚ್ಚಲಾಗಿದೆ ಎಂದು ಜಯಲಲಿತಾ ಅವರ ಬೆಂಬಲಿಗ ದೇವಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.