ಮುಂಬಯಿ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಸಹೋದರ ಬರೆದ ಯೇಸು ಕ್ರಿಸ್ತ ತಮಿಳು ಹಿಂದೂ ಎನ್ನುವ ವಿವಾದಾತ್ಮಕ ಪುಸ್ತಕವು 70 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗುತ್ತಿದೆ.
ಗಣೇಶ್ ಸಾರ್ವಕರ್ ಈ ಪುಸ್ತಕವನ್ನು ಬರೆದಿದ್ದು, ಫೆ. 26 ರಂದು ಸಾವರ್ಕರ್ ಅವರು ಮರಣ ಹೊಂದಿದ ದಿನದಂದು ಮರು ಬಿಡುಗಡೆಯಾಗುತ್ತಿದೆ. ಈ ಪುಸ್ತಕವನ್ನು ಮೊದಲು 1946 ರಲ್ಲಿ ಬಿಡುಗಡೆ ಮಾಡಲಾಗಿತ್ತು.
ಈ ಪುಸ್ತಕದಲ್ಲಿ ಯೇಸು ಕ್ರಿಸ್ತವೊಬ್ಬ ಹಿಂದೂ ತಮಿಳಿಗನಾಗಿದ್ದ, ಕ್ರೈಸ್ಥ ಧರ್ಮ ಹಿಂದೂ ತಳಹದಿಯಿಂದ ಬಂದಿದೆ. ಯೇಸು ಮರಣ ಹೊಂದಿದ್ದು ಕಾಶ್ಮೀರದಲ್ಲಿ ಎಂದು ಬರೆಯಲಾಗಿದೆ. ಯೇಸುವಿನ ನಿಜ ನಾಮ ಕೇಶಿಯೋ ಕೃಷ್ಣ, ಈತನ ಭಾಷೆ ತಮಿಳು ಎಂದು ಹೇಳಲಾಗಿದೆ.
ಈಗಿನ ಪ್ಯಾಲೆಸ್ತೆನ್ ಮತ್ತು ಅರಬಿಯಾ ಹಿಂದೂ ರಾಷ್ಟ್ರವಾಗಿತ್ತು. ಭಾರತದಲ್ಲಿ ಯೇಸು ಯೋಗ ಕಲಿತಿದ್ದ ಎಂದು ಹೇಳಲಾಗಿದೆ.
ಈ ಪುಸ್ತಕ ಬಿಡುಗಡೆಗೆ ಕ್ರೈಸ್ತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.