ರೋಟಕ್: ಹಲವು ದಿನಗಳ ಪ್ರತಿಭಟನೆ ಹಿಂಸಾಚಾರದ ಬಳಿಕ ಹರಿಯಾಣ ಸಹಜ ಸ್ಥಿತಿಗೆ ಮರಳಿದೆ. ಹೈವೇ, ರೈಲುಗಳು ಮತ್ತೆ ಕಾರ್ಯಾರಂಭ ಮಾಡಿದೆ. ಆದರೂ ಭದ್ರತಾ ಪಡೆಗಳು ಅಲರ್ಟ್ನಲ್ಲಿದ್ದು, ಯಾವುದೇ ಹಿಂಸಾಚಾರ ಮತ್ತೆ ಉದ್ಭವವಾಗದಂತೆ ನೋಡಿಕೊಳ್ಳುತ್ತಿವೆ.
ಕೆಲವು ದಿನಗಳಿಂದ ಜಾಟರ ಹಿಂಸಾಚಾರದಿಂದ ರಣಾಂಗಣವಾಗಿದ್ದ ಹರಿಯಾಣದಲ್ಲಿ ಜನರ ಜೀವನ ಹಳಿ ತಪ್ಪಿತ್ತು, ವ್ಯಾಪಾರಸ್ಥರು, ಉದ್ಯೋಗಿಗಳು ಮನೆಯಲ್ಲಿ ಕುಳಿತಿರಬೇಕಾಯಿತು. ಅಗತ್ಯ ವಸ್ತುಗಳಿಗೂ ಪರದಾಟ ನಡೆಸಬೇಕಾಯಿತು. ಇದು ಅಲ್ಲಿನ ಜನರನ್ನು ಸಹಜವಾಗಿಯೇ ಆಕ್ರೋಶಕ್ಕೆ ದೂಡಿದೆ.
ಹಲವು ದಿನಗಳ ಬಳಿಕ ರೋಟಕ್ಗೆ ಭೇಟಿ ನೀಡಿದ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರನ್ನು ವ್ಯಾಪಾರಿಗಳು, ಸಾಮಾನ್ಯ ಜನರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅವರನ್ನು ದೆಹಲಿಗೆ ಹಿಂದಿರುಗುವಂತೆ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸುವುದಾಗಿ ಖಟ್ಟರ್ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.