ನವದೆಹಲಿ: ಪ್ರಧಾನಿ ನರೇಂದ್ರ ಮೊದಿಗೆ ಅವರ ಹೆಸರನ್ನು ಬರೆದಿರುವ ಉಡುಪನ್ನು ನೀಡಿದ್ದ ಉದ್ಯಮಿ ಪಟೇಲ್ ಆಕಾ ಬಾದಶಾ ದೇಶದ 10,000 ಹೆಣ್ಣುಮಕ್ಕಳಿಗಾಗಿ ತಲಾ 2 ಲಕ್ಷ ರೂ.ಯಂತೆ 200 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ’ಬೇಟಿ ಬಚಾವೋ- ಬೇಟಿ ಪಢಾವೋ’ ಯೋಜನೆಯಿಂದ ಪ್ರೇರಿತರಾಗಿರುವುದಾಗಿ ಬಾದಶಾ ಹೇಳಿದ್ದಾರೆ. ಆದ್ದರಿಂದ ತಮ್ಮ ಕೊಡುಗೆಯಾಗಿ ಮಾರ್ಚ್ 13ರಂದು ಸೂರತ್ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡುವ ವೇಳೆ ರಾಷ್ಟ್ರಾದ್ಯಂತ ಆಯ್ಕೆಗೊಂಡಿರುವ 10,000 ಹೆಣ್ಣುಮಕ್ಕಳ ಪೋಷಕರಿಗೆ ತಲಾ 2 ಲಕ್ಷ ರೂಪಾಯೋತೆ ಒಟ್ಟು 2 ಕೋಟಿ ರೂ. ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಪಟೇಲ್ ಆಕಾ ಬಾದಶಾ ಅವರು ಉದ್ಯಮಿ, ಕಟ್ಟಡ ನಿರ್ಮಾಣಗಾರ ಹಾಗೂ ಏರ್ಲೈನ್ ಮಾಲೀಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.