ಇಸ್ಲಾಮಾಬಾದ್: 15 ವರ್ಷ ಬಳಿಕ ಪಾಕಿಸ್ಥಾನದ ಜಿಹಾದಿ ಸಂಘಟನೆ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾ ಪರವಾಗಿ ಸಾರ್ವಜನಿಕ ಹೇಳಿಕೆ ನೀಡಿದೆ.
ಜಮ್ಮು ಕಾಶ್ಮೀರದ ಪ್ಯಾಂಪೋರ್ನಲ್ಲಿ ಲಷ್ಕರ್ ಉಗ್ರರು ನಡೆಸಿದ 48 ಗಂಟೆಗಳ ಗುಂಡಿನ ಚಕಮಕಿಯನ್ನು ಜಮಾತ್ ಉದ್ ದಾವಾ ಹಾಡಿ ಹೊಗಳಿದೆ. ಈ ಘಟನೆಯಲ್ಲಿ 5 ಸೈನಿಕರು ಮೃತರಾಗಿದ್ದರು ಮತ್ತು 12ಕ್ಕೂ ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಜಮಾತ್ ಉದ್ ದಾವಾ ಸೋಶಲ್ ಮೀಡಿಯಾ ಮುಖ್ಯಸ್ಥ ತಹ ಮುನೀಬ್, ಕಾಶ್ಮೀರಿ ಮುಜಾಹಿದ್ದೀನ್ ಲಷ್ಕರ್-ಇ-ತೋಯ್ಬಾ ಭಾರತೀಯ ಸೈನಿಕರನ್ನು ನರಕಕ್ಕೆ ಕಳುಹಿಸಿದೆ ಎಂದಿದ್ದಾನೆ.
ನಿಮ್ಮ ಯುವ ಕ್ಯಾಪ್ಟನ್ಗಳ ಮರಣವನ್ನು ನಿಲ್ಲಿಸಬೇಕಾದರೆ ಇರುವುದು ಒಂದೇ ಪರಿಹಾರ ಅದು ಕಾಶ್ಮೀರವನ್ನು ಬಿಡುವುದು ಎಂದಿದ್ದಾರೆ, ಅಲ್ಲದೇ ಸಿಖ್, ಕಾಶ್ಮೀರಿ ಮತ್ತು ಜಾಟರಿಂದ ಭಾರತ ಧ್ವಂಸಗೊಳ್ಳುವುದನ್ನು ಯಾರೊಬ್ಬರೂ ತಡೆಯಲಾರರು ಎಂದಿದ್ದಾನೆ.
ಜಮಾತ್ ಉದ್ ದಾವಾವನ್ನು ಪಾಕಿಸ್ಥಾನ ಸರ್ಕಾರ ಮಾನವತಾವದಿ ಸಂಘಟನೆ ಎಂದು ವಾದಿಸುತ್ತಿದೆ, ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇದು ಲಷ್ಕರ್ನ ಅಂಗ ಸಂಸ್ಥೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.