ನವದೆಹಲಿ: ಭಾರತ ಸರ್ಕಾರ ಪಾಕಿಸ್ಥಾನದ ಜೊತೆ ಒಂದು ಪರಸ್ಪರ ಗೌರವಯುತ ಸಂಬಂಧವನ್ನು ಮುನ್ನಡೆಸಲು ಬದ್ಧವಾಗಿದೆ. ಆದರೆ ಗಡಿ ಉಲ್ಲಂಘನೆ ಎದುರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
2016ನೇ ಸಾಲಿನ ಬಜೆಟ್ನ ಜಂಟಿ ಅಧಿವೇಶನದ ಆರಂಭದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆಯಾಗಿದ್ದು, ವಿಶ್ವದಾತ್ಯಂತ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕಳೆದ ವರ್ಷ ಭಾರತ ಸರ್ಕಾರ ಬಾಂಗ್ಲಾದೇಶದೊಂದಿದೆ ಐತಿಹಾಸಿಕ ಗಡಿ ಒಪ್ಪಂದ ಮಾಡಿಕೊಂಡಿದ್ದು, ಎರಡೂ ದೇಶಗಳ ಜೊತೆ ವಿವಾದಿತ ಪ್ರದೇಶಗಳ ಶಾಂತಿಯುತ ವಿನಿಮಯಕ್ಕೆ ಕಾರಣವಾಗಿದೆ.
ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಭೂತಾನ್ ಜೊತೆ ಮೋಟಾರ್ ವಾಹನ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ನಿರಂತರ ಸಂಪರ್ಕ ಒದಗಿಸಲು ಮತ್ತು ಸಂಬಂಗಳು ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಎಪ್ರಿಲ್ 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ವೇಳೆ ನೇಪಾಳಕ್ಕೆ ನಾವು ಓರ್ವ ಸ್ನೇಹಿತರಾಗಿ ಸಹಕರಿಸಿದ್ದೇವೆ. ಅಫ್ಘಾನಿಸ್ಥಾನವನ್ನು ಸ್ಥಿರ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಿಸಲು ಭಾರತ ಬೆಂಬಲಿಸಿದೆ ಎಂದು ಮುಖರ್ಜಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.