ಪುಣೆ: ಬಾಲಿವುಡ್ ನಟ, ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ ಗುರುವಾರ ಮಹಾರಾಷ್ಟ್ರದ ಯೆರವಾಡಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆ. 25 ರಂದು ಬೆಳಿಗ್ಗೆ 9 ಗಂಟೆಗೆ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಇವರ ಸ್ವಾಗತಕ್ಕೆ ಕುಟುಂಬ ಆಯೋಜಿಸಿದ್ದ ಸಣ್ಣ ಸ್ವಾಗತ ಕಾರ್ಯಕ್ರಮಕ್ಕೆ ಜೈಲು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.
1993ರ ಮಾ.12ರಂದು ನಡೆದ ಮುಂಬಯಿ ಸರಣಿ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಸಂಜಯ್ ಅವರ ಮೇಲಿದೆ. 5 ವರ್ಷ ಸಜೆ ವಿಧಿಸಲಾಗಿದ್ದು, ಎರಡು ಅವಧಿಯಲ್ಲಿ ಪೆರೋಲ್ ಪರ್ಲೋವನ್ನು ಹೊರತುಪಡಿಸಿ 50 ತಿಂಗಳು ಶಿಕ್ಷೆ ಅನುಭವಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.