ಕೋಲ್ಕತ್ತಾ: ಮೀಸಲಾತಿಯ ಅರ್ಹತೆಯನ್ನು ನಿರ್ಧರಿಸುವುದಕ್ಕಾಗಿ ರಾಜಕೀಯೇತರ ಸಮಿತಿಯನ್ನು ರಚನೆ ಮಾಡಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
’ಬಹುತೇಕ ಜನರು ಮೀಸಲಾತಿಯ ಬೇಡಿಕೆಯಿಡುತ್ತಿದ್ದಾರೆ. ನನಗನಿಸುತ್ತದೆ ಯಾರು ಮೀಸಲಾತಿಗೆ ಅರ್ಹರು ಎಂಬುದನ್ನು ತಿಳಿದುಕೊಳ್ಳಲು ಸಮಿತಿಯೊಂದನ್ನು ರಚಿಸಬೇಕು. ಆದರೆ ಸ್ವ ಹಿತಾಸಕ್ತಿಯನ್ನು ದೂರವಿರಿಸುವ ಸಲುವಾಗಿ ಈ ಸಮಿತಿ ರಾಜಕೀಯೇತರವಾಗಿರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಸಮಾಜದ ಯಾವ ವರ್ಗವನ್ನು ಮುಂದಕ್ಕೆ ತರಬೇಕು. ಎಲ್ಲಿಯವರೆಗೆ ಅವರಿಗೆ ಮೀಸಲಾತಿಯನ್ನು ನೀಡಬೇಕು. ಈ ಸಂಬಂಧ ಅವಧಿಯನ್ನು ನಿರ್ಧರಿಸಬೇಕು. ಮೀಸಲಾತಿ ತೆಗೆಯುವ ಅಧಿಕಾರವನ್ನೂ ಸಮಿತಿಗೆ ನೀಡಬೇಕು’ ಎಂದಿದ್ದಾರೆ.
ಅಲ್ಲದೇ ಯಾರೊಬ್ಬರೂ ತನ್ನ ಹುಟ್ಟಿನ ಕಾರಣದಿಂದಾಗಿ ಅವಕಾಶ ವಂಚಿತನಾಗಬಾರದು. ಎಲ್ಲರಿಗೂ ಸಮಾನ ಅವಕಾಶಗಳಿರಬೇಕು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.