ನವದೆಹಲಿ: ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲೇ ಬಗೆಹರಿಸುವ ಬದಲು ಎಲ್ಲಾ ವಿಷಯಗಳಿಗೂ ತನ್ನನ್ನು ಸಂಪರ್ಕಿಸುವ ಎಎಪಿ ಸರ್ಕಾರದ ವಿರುದ್ಧ ಸುಪ್ರಿಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಎಸಿ ರೂಂನಲ್ಲಿ ಕುಳಿತುಕೊಳ್ಳುವ ಬದಲು ಹೊರಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಅದು ಸಲಹೆ ನೀಡಿದೆ.
ಹರಿಯಾಣದಲ್ಲಿ ಜಾಟ್ ಹೋರಾಟ ನಡೆಯುತ್ತಿರುವುದರಿಂದ ದೆಹಲಿಗೆ ನೀರಿನ ಪೂರೈಕೆ ತೊಂದರೆಯಾಗಿದೆ. ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ದೆಹಲಿ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಟಿಎಸ್ ಠಾಕೂರ್, ನ್ಯಾ.ಯು. ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ, ಸರ್ಕಾರ-ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು ಸುಪ್ರೀಂಕೋರ್ಟ್ಗೆ ಬರುತ್ತಿದ್ದೀರಿ. ನಿಮಗೆ ಎಲ್ಲದಕ್ಕೂ ಸುಪ್ರೀಂನ ಅಜ್ಞೆ ಬೇಕು.
’ನೀವು ಸಚಿವರುಗಳು ಫೀಲ್ಡ್ಗೆ ಇಳಿಯುವ ಬದಲು ಎಸಿ ರೂಂನಲ್ಲಿ ಕೂತು ರೆಸ್ಟ್ ಮಾಡುತ್ತೀರಿ. ಕೋರ್ಟ್ನಿಂದ ಆದೇಶ ನಿರೀಕ್ಷಿಸುತ್ತೀರಿ’ ಎಂದು ನ್ಯಾಯಪೀಠ ಹೇಳಿದೆ.
ಆದರೂ ದೆಹಲಿ ಸರ್ಕಾರದ ದೂರಿನ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹರಿಯಾಣ ಸರ್ಕಾರಕ್ಕೆ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.