ಪಾಟ್ನಾ: ಕಂಟಿನಮ್ ಕೇರ್ ಸರ್ವೀಸಸ್ (ಸಿಸಿಎಸ್) ಬಿಹಾರದಾದ್ಯಂತ ಸಾವಿರಾರು ಮಹಿಳೆಯರು, ಪುರುಷರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ಫ್ರಂಟ್ಲೈನ್ ಹೆಲ್ತ್ ವರ್ಕರ್ಸ್ನ ಮೊಬೈಲ್ ಹೆಲ್ತ್ ಮತ್ತು ತಂತ್ರಜ್ಞಾನ ಸಂಬಂಧಿತ ಸರಳ ಮತ್ತು ಆರೋಗ್ಯ ಉಪಕ್ರಮ ಇದಾಗಿರ. ಮೊಬೈಲ್ ಫೋನ್ ಸಹಾಯದಿಂದ ಕಳಪೆ ಸಂಪನ್ಮೂಲಗಳ ಆರೋಗ್ಯ ವ್ಯವಸ್ಥೆಯನ್ನು ಹತೋಟಿಗೆ ತರಲು, ಮಕ್ಕಳ ಮತ್ತು ಮಹಿಳೆಯರ ಆರೋಗ್ಯ ಸುಧಾರಿಣೆಯ ಸವಾಲುಗಳನ್ನು ಎದುರಿಸಲು ಸಹಾಯಕವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಿಸಿಎಸ್ ಸುಧಾರಣೆ ಹಾಗೂ ಸಾಮಾನ್ಯ ಅಪ್ಲಿಕೇಷನ್ ತಂತ್ರಾಂಶವನ್ನು ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ ಬಲಪಡಿಸಲು ಬಳಸಲಾಗುತ್ತಿದೆ.
ಗರ್ಭಿಣಿ ಮಹಿಳೆಯರು, ತಾಯಂದಿರು, ನವಜಾತ ಶಿಶು ನೋಂದಾಯಿಸಿಕೊಳ್ಳಬಹುದು. ಗರ್ಭಧಾರಣೆ, ಮಗು ಜನಿಸಿದ ನಂತರದ ಕಾಳಜಿ ಹಂತಗಳ ಸೂಕ್ತ ಮತ್ತು ಸಕಾಲಿಕ ಸೇವೆಗಳ ನಿಜಾವಧಿಯ ಆರೋಗ್ಯ ಮಾಹಿತಿ (real time information) ರೆಕಾರ್ಡ್ ಮಾಡಬಹುದಾಗಿದೆ.
ಫ್ರಂಟ್ಲೈನ್ ಹೆಲ್ತ್ ಸರ್ವೀಸ್ ಕೌಸೆಲಿಂಗ್ನೊಂದಿಗೆ ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಣೆ, ವೇಳಾಪಟ್ಟಿ, ಯೋಜನೆ ಮತ್ತು ಮನೆ ಭೇಟಿಗೆ ಸಹಕರಿಸುವ ಸೇವೆಗಳನ್ನು ಒದಗಿಸುತ್ತವೆ.
ಪೌಷ್ಠಿಕತೆ, ಗರ್ಭಧಾರಣೆ, ನವಜಾತ ಶಿಶು ರಕ್ಷಣೆಗೆ ಸಿಸಿಎಸ್ ಅನ್ವಯವಾಗುತ್ತಿದ್ದು, ಇದರ ಹಲವು ಘಟಕಗಳು, ಅಪ್ಲಿಕೇಷನ್ ಸೂಟ್ ಒಳಗೊಂಡ mHealth ಪರಿಹಾರದಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.