ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಈ ದೇಶದ ಉನ್ನತ ಸ್ಥಾನವನ್ನು ಅಲಂಕರಿಸಿದರೂ ಹಿರಿಯರನ್ನು ಕಂಡಾಗ ತಮ್ಮ ಸ್ಥಾನಮಾನವನ್ನು ಮರೆತು ಅವರು ಸಾಮಾನ್ಯ ವ್ಯಕ್ತಿಯಾಗುತ್ತಾರೆ. ತನ್ನ ಸಮಾವೇಶಕ್ಕೆ ಆಗಮಿಸಿದ್ದ 104ರ ವಯಸ್ಸಿನ ವಯೋವೃದ್ಧೆಯೊಬ್ಬರ ಕಾಲುಮುಟ್ಟಿ ಅವರು ನಮಸ್ಕರಿಸಿದ್ದೇ ಇದಕ್ಕೆ ಸಾಕ್ಷಿ.
ಛತ್ತೀಸ್ಗಢದ ಧಮತ್ರಿ ಜಿಲ್ಲೆಯವರಾದ ಕನ್ವರ್ ಭಾಯಿ ಅವರ ವಯಸ್ಸು 104, ಈ ಇಳಿ ವಯಸ್ಸಿನಲ್ಲೂ ಅವರು ತಮ್ಮ ಬಳಿ ಇದ್ದ ಮೇಕೆಗಳನ್ನು ಮಾರಿ ಮನೆಯಲ್ಲಿ ಎರಡು ಶೌಚಾಲಯಗಳನ್ನು ಕಟ್ಟಿಸಿದ್ದಾರೆ.
ಅವರ ಮನೆಗೆ ಪೇಪರ್ ಬರುವುದಿಲ್ಲ, ಟಿವಿ ಇಲ್ಲ. ಹೀಗಿದ್ದರೂ ಸ್ವಚ್ಛ ಭಾರತದ ಅಡಿಯಲ್ಲಿ ಆರಂಬಿಸಲಾಗಿರುವ ಶೌಚಾಲಯದ ನಿರ್ಮಾಣದ ಆಭಿಯಾನವನ್ನು ಅರಿತುಕೊಂಡು ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿದ್ದಾರೆ. 8 ಮೇಕೆಗಳನ್ನು ಮಾರಿ ಎರಡು ಶೌಚಾಲಯ ನಿರ್ಮಿಸಿದ್ದಾರೆ. ಈ ಮೂಲಕ ತಮ್ಮ ಗ್ರಾಮದ ಜನರಿಗೆ ಪ್ರೇರಣೆಯಾದರು.
ಇತ್ತೀಚಿಗೆ ಮೋದಿ ಛತ್ತೀಸ್ಗಢದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಯೋಜನೆಗೆ ಚಾಲನೆ ನೀಡಲು ತೆರಳಿದ ಸಂದರ್ಭ, ಕನ್ವರ್ ಭಾಯಿ ಅವರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಈ ವೇಳೆ ಮೋದಿ ವಿನಂಬ್ರತೆಯಿಂದ ಆ ವೃದ್ಧೆ ಕಾಲಿಗೆರಗಿ ಆರ್ಶೀವಾದವನ್ನು ಪಡೆದುಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.