ನವದೆಹಲಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಅವರು ಆರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಇಂದು ಎರಡೂ ದೇಶಗಳ ಪ್ರಧಾನಿಗಳು 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ದೆಹಲಿಯ ಹೈದರಾಬಾದ್ನ ಹೌಸ್ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ 9 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಳಿಕ ಭಾರತ ನೀಡಿದ ರೂ.250 ಮಿಲಿಯನ್ ಡಾಲರ್ ಪರಿಹಾರ, ವಿಶಾಖಪಟ್ಟಣದಿಂದ ರೈಲು ಸೇವೆ, ನೇಪಾಳದ ಟೆರೈ ಪ್ರದೇಶದಲ್ಲಿ ರಸ್ತೆ ಸುಧಾರಣೆ, ಭಾರತದ ಸಂಗೀತ ನಾಟಕ ಅಕಾಡೆಮಿಯೊಂದಿಗೆ ನೇಪಾಳದ ಸಂಗೀತ ಮತ್ತು ನಾಟಕ ಅಕಾಡೆಮಿಯು ಕಲೆಗಳ ವಿನಿಯಮಯ ಮಾಡಲಿದೆ, ನೇಪಾಳ ಮತ್ತು ಬಾಂಗ್ಲಾ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಭಾರತದ ಪ್ರಯಾಣ ಮಾರ್ಗಗಳ ಬಳಕೆ, ಮುಝಫರ್ ಮತ್ತು ದಲ್ಬೇಕರ್ ನಡುವೆ ವಿದ್ಯುತ್ ಸರಬರಾಜು ಒಪ್ಪಂದ, ಉಭಯ ದೇಶಗಳ ಪ್ರಮುಖ ವ್ಯಕ್ತಿಗಳನ್ನೊಳಗಂಡ ತಂಡದಲ್ಲಿ ಎರಡೂ ದೇಶದಿಂದ 4 ಸದಸ್ಯರು ಇರುವ ತಂಡದ ರಚನೆ.
ನೇಪಾಳದಲ್ಲಿ ಹೊಸ ಸಂವಿಧಾನ ಜಾರಿ ವಿರುದ್ಧದ ಪ್ರತಿಭಟನೆ ಬಳಿಕ ಈ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.