ರಾಯ್ಪುರ: ಹುತಾತ್ಮರಾದ ಪೊಲೀಸ್ ಅಧಿಕಾರಿಯೊಬ್ಬರ ಅಂತ್ಯಸಂಸ್ಕಾರಕ್ಕೆಂದು ಅವರ ಕುಟುಂಬಕ್ಕೆ ನೀಡಲಾಗಿದ್ದ 10 ಸಾವಿರ ರೂಪಾಯಿಗಳನ್ನು ವಾಪಾಸ್ ನೀಡುವಂತೆ ಸೂಚಿಸುವ ಮೂಲಕ ಛತ್ತೀಸ್ಗಢ ಪೊಲೀಸ್ ಇಲಾಖೆ ಅಮಾನವೀಯತೆಯನ್ನು ತೋರಿದೆ.
ಕಿಶೋರ್ ಪಾಂಡೆ ಎಂಬ ವಿಶೇಷ ಪೊಲೀಸ್ ಅಧಿಕಾರಿ ಅವರು ನಕ್ಸಲರೊಂದಿಗೆ ಹೋರಾಡಿ ಹುತಾತ್ಮರಾಗಿದ್ದರು. ಇವರ ಅಂತ್ಯಸಂಸ್ಕಾರಕ್ಕೆಂದು ಅವರ ಕುಟುಂಬ ಸದಸ್ಯರಿಗೆ 10 ಸಾವಿರ ರೂಪಾಯಿಯನ್ನು ನೀಡಲಾಗಿತ್ತು. ಆದರೆ ಇದನ್ನು ವಾಪಾಸ್ ಮಾಡುವಂತೆ 2014ರ ಜೂನ್ 8 ಮತ್ತು 2015ರ ಎ.12ರಂದು ಎರಡು ಬಾರಿ ಪೊಲೀಸ್ ಇಲಾಖೆ ಅವರ ಕುಟುಂಬಕ್ಕೆ ನೋಟಿಸ್ ನೀಡಿದೆ.
ಪೊಲೀಸ್ ಇಲಾಖೆಯ ಈ ಕ್ರಮದ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿವೆ.
ಭಾರೀ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡಿದೆ.
ಪೊಲೀಸ್ ಇಲಾಖೆಯ ಈ ಕ್ರಮ ನಿಜಕ್ಕೂ ನಾಚಿಗೇಡಿನದಾಗಿದೆ. ಹುತಾತ್ಮರನ್ನು ಈ ರೀತಿ ನಡೆಸಿಕೊಳ್ಳುವವರ ವಿರುದ್ಧ ಕಠಿಣಕ್ರಮವನ್ನು ಜರುಗಿಸುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.