ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆಯಾಗಿರುವ ಶ್ರೀನಿವಾಸನ್ ಅವರು ಅಮೆರಿಕ ಸುಪ್ರೀಂಕೋರ್ಟ್ನ ನ್ಯಾಯಾಧೀಶರಾಗುವ ರೇಸ್ನಲ್ಲಿದ್ದಾರೆ.
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ರೀನಿವಾಸನ್ ಅವರನ್ನು ಬೆಂಬಲಿಸಿದ್ದಾರೆ, ಆದರೆ ರಿಪಬ್ಲಿಕನ್ನರು ಒಬಾಮ ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ.
ಸದ್ಯ ಶ್ರೀನಿವಾಸನ್ ಅವರು ಅಮೆರಿಕಾದ ಎರಡನೇ ಅತೀದೊಡ್ಡ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 2013ರಲ್ಲಿ ಈ ಹುದ್ದೆಗೆ ಅವರು ಯುಎಸ್ ಸೆನೆಟ್ನಲ್ಲಿ 97-0 ಮತಗಳನ್ನು ಪಡೆದಿದ್ದರು, ರಿಪಬ್ಲಿಕನ್ನರು ಕೂಡ ಅವರನ್ನು ಬೆಂಬಲಿಸಿದ್ದರು.
ಇದಿಗ ಅವರು ಶ್ರೀನಿವಾಸನ್ ಅವರನ್ನು ಬೆಂಬಲಿಸದೇ ಹೋದರೆ ಯಾಕೆ ಬೆಂಬಲಿಸಲಾಗಿಲ್ಲ ಎಂಬ ಪ್ರಶ್ನೆಗೂ ಅವರು ಉತ್ತರ ನೀಡಬೇಕಿದೆ.
ಅದೇನೆಯಿರಲಿ ವೈಟ್ಹೌಸ್ನಲ್ಲಿ ಹಲವಾರು ಹೆಸರುಗಳಿದ್ದು, ಅದರಲ್ಲಿ ಶ್ರೀನಿವಾಸನ್ ಹೆಸರು ಫೇವರೇಟ್ ಎನಿಸಿದೆ. ಆದರೆ ನಿರ್ಧಾರ ಇನ್ನಷ್ಟೇ ಹೊರಬರಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.