ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ತಮ್ಮ ಸೇವಾ ಭದ್ರತೆಗಾಗಿ ಪ್ರತಿಭಟಿಸುತ್ತಿರುವ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸಿದೆ.
ಸೇವಾ ಭದ್ರತೆಗಾಗಿ ಶಾಲಾಕಾಲೇಜುಗಳ ಬಂದ್ಗೆ ಕರೆ ನೀಡಿದ್ದರು. ಅದರ ಬೆನ್ನಲೇ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರನ್ನು ವಾಪಾಸ್ ಕೆಲಸಕ್ಕೆ ಪಡೆಯದಂತೆ ಸರಕಾರ ಈ ಆದೇಶ ಹೊರಡಿಸಿದೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಕಳೆದ ಒಂದು ತಿಂಗಳಿನಿಂದ ಕಾಲೇಜುಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕಾಲೇಜುಗಳಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಿಲ್ಲ. ಪರೀಕ್ಷೆಗಳು ಸಮೀಪಿಸುತ್ತಿದೆ, ಬೋಧನಾ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆದುದರಿಂದ ಪ್ರತಿಭಟನಾ ನಿರತ ಶಿಕ್ಷಕರನ್ನು ವಜಾಗೊಳಿಸಿ, ಪದವಿ ಕಾಲೇಜುಗಳಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿ ಆಯ್ಕೆಗೆ ಬಾಕಿಯಾಗಿರುವ ಅತಿಥಿ ಉಪನ್ಯಾಸಕರ ಪಟ್ಟಿಗೆ ಚಾಲನೆ ನೀಡಬೇಕು. ಒಂದೊಮ್ಮೆ ಉಪನ್ಯಾಸಕರ ಪಟ್ಟಿ ಇಲ್ಲದಿದ್ದಲ್ಲಿ ಸಮೀಪದ ಸರಕಾರಿ ಕಾಲೇಜುಗಳಿಂದ ಪಡೆಯುವಂತೆ ಹೇಳಲಾಗಿದೆ. ಮಾತ್ರವಲ್ಲ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಅಲಭ್ಯವಾಗಿದ್ದಲ್ಲಿ ಸ್ಥಳೀಯವಾಗಿ ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆಮಾಡಲು ತಿಳಿಸಲಾಗಿದೆ.
ಈ ಮೂಲಕ ಪ್ರತಿಭಟನಾ ನಿರತರಿಗೆ ಸರಕಾರ ಕ್ಯಾರೇ ಅನ್ನದೇ ಬಿಸಿ ಮುಟ್ಟಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.