ಬೆಂಗಳೂರು: ದೇಶದಲ್ಲಿ ಬಹು ಚರ್ಚಿತವಾಗಿದ್ದ ಅಸಹಿಷ್ಣುತೆ ವಿಚಾರದ ನಡುವೆಯೂ ಮಂಗಳೂರಿನ ಪುತ್ತೂರಿನ 13 ವರ್ಷದ ಮುಸ್ಲಿಂ ಬಾಲಕಿಯೊಬ್ಬಳು ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅಸಹಿಷ್ಣುತೆ ಇಲ್ಲ ಎಂದು ತೋರಿಸಿದ್ದಾಳೆ.
ಭಾರತ ಸಂಸ್ಕೃತಿ ಪ್ರತಿಷ್ಠಾನ ಕಳೆದ ನ. 2015ರಲ್ಲಿ ಆಯೋಜಿಸಿದ್ದ ರಾಮಾಯಣ ಪರೀಕ್ಷೆಯಲ್ಲಿ ಫಾತಿಮತ್ ರೋಹಿಲಾ ಶೇ.93 ಅಂಕ ಪಡೆದಿದ್ದಾಳೆ. ಸರ್ವೋದಯ ಹೈಸ್ಕೂಲ್ನ ವಿದ್ಯಾರ್ಥಿನಿಯಾಗಿರುವ ಫಾತಿಮತ್, ರಾಮಾಯಣ ಹಾಗೂ ಮಹಾಭಾರತ ಕೋರ್ಸ್ ಮಾಡಲು ತೀವ್ರ ಆಸಕ್ತಿ ತೋರಿದ್ದಾಳೆ. ಇವಳ ಪರಿಶ್ರಮಕ್ಕೆ ಅವಳ ಚಿಕ್ಕಪ್ಪ ಹೆಚ್ಚು ಸಹಕಾರಿಯಾಗಿದ್ದರು ಎಂದಿರುವ ಫಾತಿಮತ್ ಮಹಾಭಾರತ ಪರೀಕ್ಷೆಯನ್ನೂ ಬರೆಯುತ್ತೇನೆ ಎಂದಿದ್ದಾಳೆ.
ಪ್ರಸ್ತುತ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಫಾತಿಮತ್ ಮುಂಬರುವ ಬೇಸಿಗೆ ರಜಾ ಸಮಯದಲ್ಲಿ ಮಹಾಭಾರತ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾಳೆ.
ಕಳೆದ ವರ್ಷ 12 ವರ್ಷದ ಮಾರಿಯಮ್ ಸಿದ್ದಿಕಿ ಎಂಬ ಮುಸ್ಲಿಂ ಬಾಲಕಿ ಅಂತರ್-ಶಾಲಾ ಭಗವದ್ಗೀತಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.