ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾಸಿದ್ದ ಫೇಸ್ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಅವರನ್ನು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಗುರುವಾರ ಟೀಕೆ ವ್ಯಕ್ತಪಡಿಸಿದ್ದಾರೆ .
ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ ಉತ್ತಮವಾಗಿತ್ತು ಎಂಬ ಹೇಳಿಕೆ ಮಾಡಿದ್ದು ತಾರತಮ್ಯದ ಇಂಟರ್ನೆಟ್ ದರಕ್ಕೆ ಭಾರತ ವಿರೋಧ ವ್ಯಕ್ತಪಡಿಸಿರುವುದು ’ಕೊಲೊನಿಯಲಿಸ್ಟ್ ವಿರೋಧಿ’ ಎಂದಿದ್ದ. ಅಲ್ಲದೇ ಭಾರತೀಯರು ಮತ್ತೊಮ್ಮೆ ಆರ್ಥಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು.
ಆತನ ಈ ಹೇಳಿಕೆಗೆ ಟ್ವಿಟರ್ ಮೂಲಕ ಹಲವಾರು ಭಾರತೀಯರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಆತ ಭಾರತೀಯರ ಕ್ಷಮೆಯಾಚಿಸಿದ್ದ. ಆ್ಯಂಡ್ರೀಸನ್ ಅವರ ಈ ರೀತಿಯ ಟ್ವೀಟ್ ಮಾಡಿರುವುದು ತನಗೆ ನಿಜಕ್ಕೂ ಬೇಸರವನ್ನುಂಟು ಮಾಡಿದೆ. ಫೇಸ್ಬುಕ್ ಇಂತಹ ನಿಲುವುಗಳನ್ನು ಒಪ್ಪಿಕೊಳ್ಳುಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ಮತ್ತು ಫೇಸ್ಬುಕ್ಗೆ ಭಾರತ ಪ್ರಮುಖವಾಗಿದೆ. ತಾನು ಭಾರತಕ್ಕೆ ಪ್ರವಾಸಕ್ಕೆಂದು ಹೋದಾಗ ಅಲ್ಲಿನ ಜನರಲ್ಲಿನ ಮಾನವೀಯತೆ ನನಗೆ ಬಹಳ ಇಷ್ಟವಾಗಿತ್ತು. ಅಲ್ಲಿಯ ಜನರ ಆತ್ಮವಿಶ್ವಾಸ ಹಾಗೂ ಮೌಲ್ಯಗಳು ನನಗೆ ಇಷ್ಟವಾಯಿತು. ಪ್ರತಿಯೊಬ್ಬರಿಗೂ ಅವರವರ ಅನಿಸಿಕೆ ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.