ಹಗರಿಬೊಮ್ಮನಹಳ್ಳಿ(ಬಳ್ಳಾರಿ) : ಒಂದೇ ಕುಟುಂಬದ 24 ಮಂದಿ ದೇಹದಾನ ಮಾಡಿದ ಅಪರೂಪದ ಫಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.
ತಮ್ಮ ಮರಣಾನಂತರ ದೇಹ ಮಣ್ಣಾಗುವುದು ಅಥವಾ ಬೂದಿಯಾಗುವ ಬದಲಿಗೆ ವೈದ್ಯಲೋಕಕ್ಕೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ದೇಹದಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಈ ಕುಟುಂಬ ಇತರರಿಗೆ ದೇಹದಾನ ಮಾಡಲು ಪ್ರೇರಣೆ ನೀಡಿದೆ.
ತಂಬ್ರಹಳ್ಳಿಗ್ರಾಮದ ದಿ. ಕೃಷ್ಣ ಮೂರ್ತಿ ರಾವ್ ಹವಾಲ್ದಾರ್ ಅವರು ತಮ್ಮ ದೇಹವನ್ನು ದಾನಮಾಡಿದ್ದರು. ಫೆ.5 ಕ್ಕೆ ದಿ. ಕೃಷ್ಣ ಮೂರ್ತಿ ರಾವ್ ಹವಾಲ್ದಾರ್ ಅವರು ಕುಟುಂಬವನ್ನು ಅಗಲಿ ಒಂದು ವರ್ಷ ಸಂದಿದೆ. ಅವರ ನಿರ್ಧಾರದಿಂದ ಪ್ರೇರಿತರಾದ ಹವಾಲ್ದಾರ್ ಅವರ ಪತ್ನಿ, ಮಕ್ಕಳು, ಅಳಿಯಂದಿರು ಹಾಗೂ ಸಹೋದರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 24 ಮಂದಿ ದೇಹದಾನದ ನಿರ್ಧಾರ ಕೈಗೊಂಡಿದ್ದು, ಬಳ್ಳಾರಿಯ ವಿಮ್ಸ್ಗೆ ಎಲ್ಲರೂ ದೇಹದಾನ ಮಾಡಿದ್ದಾರೆ.
ಈ ಮೂಲಕ ರಾಜ್ಯದಲ್ಲೇ ಒಂದು ಅಪರೂಪದ ದಾಖಲೆಯನ್ನು ಈ ಕುಟುಂಬ ಬರೆದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.