ಚಂಡಿಗಢ : ಲಿಂಗಾನುಪಾತ ಸುಧಾರಣೆಗಾಗಿ ಹರಿಯಾಣ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಜನ್ಮದಿನವನ್ನು “ಕನ್ಯಾ ಜನ್ಮದಿನ ಉತ್ಸವ” ಎಂದು ಆಚರಿಸಲು ಹರಿಯಾಣಾ ಸರ್ಕಾರ ನಿರ್ಧರಿಸಿದ್ದು, ಬರುವ ಗುರುವಾರದಿಂದ ಈ ಯೋಜನೆಗೆ ಚಾಲನೆ ದೊರೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಹರಿಯಾಣದ ಶಿಕ್ಷಣ ಇಲಾಖೆಯ ವಕ್ತಾರರು, ಪ್ರತಿ ತಿಂಗಳು ಎರಡನೆಯ ಮಂಗಳವಾರದಂದು ಆ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಎಲ್ಲ ಮಕ್ಕಳ ಹುಟ್ಟು ಹಬ್ಬವನ್ನು ಆಯಾ ಶಾಲೆಗಳಲ್ಲಿ ಸಾಮೂಹಿಕವಾಗಿ ಉತ್ಸವದ ರೂಪದಲ್ಲಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ ಆ ಮಕ್ಕಳ ಪಾಲಕರು ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರನ್ನು ಅಹ್ವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹರಿಯಾಣದ ಜನಸಂಖ್ಯೆಯಲ್ಲಿ 1000 ಪುರುಷ 879 ಸ್ತ್ರೀ, ಹೀಗೆ ಅನುಪಾತದಲ್ಲಿದ್ದ ವ್ಯತ್ಯಾಸ ಈಗ ತುಸು ಸುಧಾರಿಸಿದ್ದು ಈ ಸಂಖ್ಯೆ ಈಗ 900ಕ್ಕೆ ತಲುಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.