ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೂರು ದಾಖಲಾದಾಗ ಸಕ್ಷಮ ಪ್ರಾಧಿಕಾರಗಳು ಅರ್ಜಿಯ ಬಗ್ಗೆ 3 ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಸಂಬಂಧ ಫೆ.೮ರೊಳಗೆ ಅರ್ಜಿ ಇತ್ಯರ್ಥಮಾಡಿ ಕೋರ್ಟ್ಗೆ ವರದಿ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ಮೇಲೆ ಕ್ರಮಕೈಗೊಳ್ಳಲು ಆದೇಶಿಸಬೇಕಾಗುತ್ತದೆ ಎಂದು ಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.
ನ್ಯಾ.ವೇಣುಗೋಪಾಲಗೌಡ ರವರು ಸರಕಾರಕ್ಕೆ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಲು ಆಸಕ್ತಿ ಇದೆಯೇ. ಇದ್ದರೆ ಈ ರೀತಿ ಕಾರ್ಯನಿರ್ವಹಿಸಿದರೆ ಭ್ರಷಾಚಾರ ನಿರ್ಮೂಲನೆ ಅಸಾಧ್ಯ. ಹೀಗಾದರೆ ಲೋಕಾಯಕ್ತ ಸಂಸ್ಥೆ ಇದ್ದರೂ ಪ್ರಯೋಜನವೇನು ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರ ೨೦೫ ಅಧೀನ ನ್ಯಾಯಾಲಯಗಳನ್ನು ಮಾಡುದಾಗಿ ಹೇಳಿದೆ. ೫ ಲೋಕಾಯುಕ್ತ ವಿಶೇಷ ಕೋರ್ಟ್ ಆರಂಭಿಸುವ ಪ್ರಕ್ರಿಯೆ ೨೦೧೩ರಲ್ಲಿ ಆರಂಭವಾಗಿದೆ. ಆದರೆ ಅದು ಇನ್ನೂ ಪೂರ್ಣಗೊಂಡಿಲ್ಲ ಎಂದು ಸರಕಾರ ಮತ್ತು ಅಧಿಕಾರಗಳ ವಿರುದ್ಧ ಕೋರ್ಟ್ ಛಾಟಿ ಬೀಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.