ವಾಷಿಂಗ್ಟನ್: ಅಮೇರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಖಾಸಗಿ ಸರ್ವರ್ನಲ್ಲಿ ಏಳು ’ಉನ್ನತ ರಹಸ್ಯ’ಗಳುಳ್ಳ ಇಮೇಲ್ಗಳು ಕಂಡು ಬಂದಿವೆ ಎಂದು ರಾಜ್ಯ ಇಲಾಖೆ ತಿಳಿಸಿದೆ.
37 ಪುಟಗಳ 22 ದಾಖಲೆಗಳುಳ್ಳ ಈ ಇಮೇಲ್ಗಳನ್ನು ಡೆಮಾಕ್ರೆಟಿಕ್ ವೈಟ್ ಹೌಸ್ನ ಇತರ ಇಮೇಲ್ಗಳೊಂದಿಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ನವೆಂಬರ್ನಲ್ಲಿ ನಡೆಯುವ ಚುನಾವಣೆಗೆ ಡೆಮೋಕ್ರೆಟಿಕ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಕ್ಲಿಂಟನ್ ಅವರ ಪರ ಸಾರ್ವಜನಿಕರು ಮತ ಚಲಾಯಿಸುವ ಮೂರು ದಿನಗಳ ಮುನ್ನ ಈ ಘಟನೆ ಬಹಿರಂಗಗೊಂಡಿದೆ.
ಈ ದಾಖಲೆಗಳನ್ನು ಕಳುಹಿಸುವ ಸಂದರ್ಭ ’ವರ್ಗೀಕೃತ’ ಎಂದು ಗುರುತಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ತನ್ನ 2016ನೇ ಅಧ್ಯಕ್ಷೀಯ ಚುನಾವಣೆಯ ಭರವಸೆಗಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದು, ಈ ಹಗರಣ ಬೆಳಕಿಗೆ ತರಲು ಇಮೇಲ್ಗಲನ್ನು ಸಂಪೂರ್ಣವಾಗಿ ಬಹಿರಂಗಗೊಳಿಸಬೇಕು ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.