ನವದೆಹಲಿ : ಭಾರತ ವಿಯೇಟ್ನಾಂನಲ್ಲಿ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಭಾರತದ ಈ ನಡೆ ಚೀನಾವನ್ನು ಕೆರಳಿಸಿದೆ. ಮೂರು ರಾಷ್ಟ್ರಗಳ ಈ ವಿವಾದಿತ ಪ್ರದೇಶದಲ್ಲಿ ಹಿಡಿತ ಸಾಧಿಸಲು ದಶಕಗಳಿಂದ ಪ್ರಯತ್ನ ನಡೆಸುತ್ತಿದೆ.
ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಅನ್ನು ಸ್ಥಾಪಿಸುವುದರಿಂದ ಕೃಷಿ, ಪರಿಸರ ಮತ್ತು ವೈಜ್ಞಾನಿಕ ಉದ್ದೇಶಗಳಿಗೆ ಬಳಸಲು ಚಿಂತನೆ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಉಪಗ್ರಹಗಳನ್ನು ಉಢಾಯಿಸುತ್ತಿದೆ ಅದಕ್ಕೂ ಸಹಕಾರಿಯಾಗಲಿದೆ. ಇದರ ನಿಯಂತ್ರಣಕೇಂದ್ರಗಳು ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ, ಬ್ರೂನೇ, ಪೂರ್ವ ಇಂಡೋನೇಷ್ಯಾದ ಬಿಯಾಕ್ ಮತ್ತು ಮಾರಿಷಸ್ ನಲ್ಲಿ ಇದರ ನಿಯಂತ್ರಣ ಕೇಂದ್ರಗಳು ಸ್ಥಾಪನೆಯಾಗಲಿವೆ.
ಇಂಡೋ-ಚೀನಾ ಗಡಿ ಭಾಗದಲ್ಲಿ ವಿಯೇಟ್ನಾಂ ಮೂಲಕ ಹದ್ದಿನ ಕಣ್ಣಿಡುವ ಚೀನಾಕ್ಕೆ ಟಾಂಗ್ ಕೊಡುವ ಚಿಂತನೆ ಭಾರತ ಮತ್ತು ವಿಯೇಟ್ನಾಂ ಚಿಂತನೆ ನಡೆಸುತ್ತಿದೆ. ಸಮುದ್ರ ಗಡಿಗಳ ಮೇಲೆ ಕಣಿಡಲು ಮತ್ತು ಮಿಲಿಟರಿ ಅತ್ಯಾಧುನಿಕ ಗುಪ್ತಚರ, ಕಣ್ಗಾವಲು ವಿಚಕ್ಷಣ ತಂತ್ರಜ್ಞಾನಗಳಿಗಾಗಿ ಇದನ್ನು ಬಳಸಲು ಚಿಂತಿಸಲಾಗುತ್ತಿದೆ.
ಚೀನಾ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿ ಗಳನ್ನು ನಸುಳಿಸಿತನ್ನ ಪ್ರಭುತ್ವವನ್ನು ಸ್ಥಾಪಿಸಲು ಮುಂದಾಗಿದ್ದು ಇದಕ್ಕೆ ಭಾರತ ಸೂಕ್ತ ಉತ್ತರ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.