ಮುಂಬಯಿ: 26/11 ಮುಂಬಯಿ ದಾಳಿಕೋರ ಕಸಬ್ ಎಂದೂ ಬಿರಿಯಾನಿ ಕೇಳಿರಲಿಲ್ಲ. ನಾನೇ ಆ ಸುದ್ದಿಯನ್ನು ಸೃಷ್ಟಿಸಿದೆ ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.
‘ನಿಕ್ಕಂ ಈ ರೀತಿ ಹೇಳಿರುವುದು ದುರಾದೃಷ್ಟ. ಮುಖ್ಯಮಂತ್ರಿಯ ಬಳಿ ಮಾತನಾಡಿದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಿಕ್ಕಂಗೆ ಸೂಚಿಸಿದ್ದೇನೆ’ ಎಂದು ಸಚಿವ ಏಕನಾಥ್ ಖಡ್ಸೆ ತಿಳಿಸಿದ್ದಾರೆ.
ವಿಚಾರಣೆಯ ಸಂದರ್ಭ ಕಸಬ್ ಪರವಾಗಿ ಎದ್ದಿದ್ದ ಭಾವನಾತ್ಮಕ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಆತ ಬಿರಿಯಾನಿ ಕೇಳಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ ಎಂದು ನಿಕ್ಕಂ ಇತ್ತೀಚಿಗೆ ಹೇಳಿದ್ದರು.
ಕಸಬ್ ಪರ ವಕೀಲರಾಗಿದ್ದ ಅಬ್ಬಾಸ್ ಖಜ್ಮಿ ಇದನ್ನು ತೀವ್ರವಾಗಿ ಖಂಡಿಸಿದ್ದು, ’ನಿಕ್ಕಂ ಕೇವಲ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡಿಲ್ಲ, ಬದಲಾಗಿ ನ್ಯಾಯಾಲಯ ದಾರಿ ತಪ್ಪಿಸಿದರು’ ಎಂದು ಆರೋಪಿಸಿದ್ದಾರೆ.
ದೇಶದ ಖ್ಯಾತ ವಕೀಲರಾಗಿರುವ ನಿಕ್ಕಂ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಪ್ರಕರಣ, ಚಿತ್ರ ನಿರ್ಮಾಪಕ ಗುಲ್ಶನ್ ಕುಮಾರ್ ಪ್ರಕರಣ, ಮುಂಬಯಿ ದಾಳಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ನಿಭಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.