ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾವು ಹಲವಾರು ವಿಶೇಷತೆಗಳನ್ನು ಕಾಣಲಿದ್ದೇವೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದ ಟ್ಯಾಬ್ಲೋ ಮತ್ತು ಫ್ರೆಂಚ್ ಸೇನಾ ತುಕಡಿ ಪೆರೇಡ್ನಲ್ಲಿ ಭಾಗವಹಿಸಲಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಯೋಧರನ್ನೊಳಗೊಂಡ ಫ್ರೆಂಚ್ ತುಕಡಿ, 36 ಬ್ಯಾಂಡ್ ಸದಸ್ಯರು 67ನೇ ಗಣರಾಜ್ಯೋತ್ಸವದಲ್ಲಿ ಪೆರೇಡ್ ನಡೆಸಲಿದ್ದಾರೆ. ಪರಮ ವೀರ ಚಕ್ರ, ಅಶೊಕ ಚಕ್ರ ಮತ್ತು ಮಹಾವೀರ್ ಚಕ್ರ ವಿಜೇತರ ಹಿಂದೆ ಇವರ ತುಕಡಿ ಪೆರೇಡ್ ನಡೆಸಲಿದೆ.
ಭಾರತೀಯ ಸೇನೆಯ ತರಬೇತಿ ಪಡೆದ ಲ್ಯಾಬ್ರೋಡರ್, ಜರ್ಮನ್ ಶೆಫರ್ಡ್ ಮುಂತಾದ ತಳಿಯ ಶ್ವಾನಗಳೂ 26 ವರ್ಷಗಳ ಬಳಿಕ ಈ ವರ್ಷದ ಗಣರಾಜ್ಯೋತ್ಸವದಲ್ಲಿ ಪೆರೇಡ್ ನಡೆಸಲಿವೆ.
ಅತೀ ಹೆಚ್ಚಿನ ಸಂಖ್ಯೆಯ ಜನರು ಮತದಾನದಲ್ಲಿ ಭಾಗವಹಿಸುವುದನ್ನು ಬಿಂಬಿಸುವ ಚುನಾವಣಾ ಆಯೋಗದ ಟ್ಯಾಬ್ಲೋ ಕೂಡ ಈ ಬಾರಿ ಮೆರುಗು ನೀಡಲಿದೆ.
ಡಾ.ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನದ ಥೀಮ್ನ್ನು ಒಳಗೊಂಡ ಟ್ಯಾಬ್ಲೋವನ್ನು ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವಾಲಯ ಪ್ರಸ್ತುತಪಡಿಸಲಿದೆ.
ಈ ಬಾರಿ ಒಟ್ಟು 23 ಟ್ಯಾಬ್ಲೋಗಳು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿವೆ.
ಈ ಎಲ್ಲಾ ಹೊಸ ಅಳವಡಿಕೆಗಳು 67ನೇ ವರ್ಷದ ಗಣರಾಜ್ಯೋತ್ಸವದ ಸೌಂದರ್ಯ ಮತ್ತು ಸೊಬಗನ್ನು ಹೆಚ್ಚಿಸಲಿದೆ ಎಂಬ ಭರವಸೆಯನ್ನು ಎಂದು ರಕ್ಷಣಾ ಸಚಿವಾಲಯದ ಪಿಆರ್ಓ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.