ನವದೆಹಲಿ: ತೆರಿಗೆದಾರರ ತೆರಿಗೆ ಪಾವತಿ ರಿಟರ್ನ್ಸ್ ವಿವರಗಳನ್ನು ಕೋಡ್ ಬಳಕೆ ವಿಧಾನದ ಮೂಲಕ ಸುಲಭವಾಗಿ ಆನ್ಲೈನ್ನಲ್ಲೇ ಪಡೆದುಕೊಳ್ಳಲು ಸಹಾಯಕವಾಗುವಂತೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆಯನ್ನು ಅಳವಡಿಸಿಕೊಂಡಿದೆ.
ಪ್ರಸ್ತುತ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್)ನ್ನು ಇಂಟರ್ನೆಟ್ ಬ್ಯಾಂಕಿಂಗ್, ಇಮೇಲ್ ಅಥವಾ ಆಧಾರ್ ಸಂಖ್ಯೆ ರಚಿಸಿದ ಒನ್ ಟೈಮ್ ಪಾಸ್ವರ್ಡ್ (ಓಟಿಪಿ) ಬಳಸಿ ಪರಿಶೀಲಸಬಹುದಾಗಿದೆ. ಇದಕ್ಕೆ ವಾರ್ಷಿಕ ಐಟಿಆರ್ ಸಲ್ಲಿಸಲು ಬಳಸುವ ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆ ಹಂಚಿಕೆ ವಿಧಾನದ ಮೂಲಕ ರಚಿತ ಎಲೆಕ್ಟ್ರಾನಿಕ್ ಪರಿಶೀಲನಾ ಕೋಡ್ (electronic verification code) ವಿಧಾನವನ್ನು ಸೇರಿಸಲಾಗಿದೆ.
ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ ಈಗ ಬ್ಯಾಂಕ್ ಖಾತೆಯ ವಿವರಗಳನ್ನು ಮುಂಚಿತವಾಗಿ ಮೌಲ್ಯೀಕರಿಸುವ ಸೌಲಭ್ಯ ಒದಗಿಸಲಿದೆ. ತೆರಿಗೆದಾರ ತನ್ನ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್, ಇಮೇಲ್ ಐಡಿ, ಮೊಬೈಲ್ ಸಂಖ್ಯೆಗಳನ್ನು ಒದಗಿಸಬೇಕಿದ್ದು, ತೆರಿಗೆದಾರನ ಬ್ಯಾಂಕ್ ವಿವಗಳು ಮತ್ತು ಇಲಾಖೆಗೆ ನೀಡಿದ ವಿವರಗಳ ಪರಿಶೀಲನೆ ನಡೆಸಲಿದೆ.
ಬ್ಯಾಂಕ್ ಮೂಲಕ ಪರಿಶೀಲನೆ ನಡೆಸಿದ ಇವಿಸಿ ಅನ್ನು ಇ-ಫೈಲಿಂಗ್ ಪೋರ್ಟ್ಲ್ ಸಹಾಯದಿಂದ ತೆರಿಗೆದಾರರ ಇಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ತಿಳಿಸಿದೆ. ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಅಲ್ಲದೇ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್ ಸಂಖ್ಯೆ) ಮೂಲಕ ಠೇವಣಿ ಮಾಹಿತಿಯನ್ನು (ಸಿಡಿಎಸ್ಎಲ್/ಎನ್ಎಸ್ಡಿಎಲ್)ನ್ನು ಮೌಲ್ಯಾಂಕನ ಮಾಡಲಾಗುವುದು ಎಂದು ಮಂಡಳಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.