ವಾಷಿಂಗ್ಟನ್: ಅಮೇರಿಕಾದ ಹಲವು ಪ್ರದೇಶಗಳಲ್ಲಿ 30 ಇಂಚ್ಗೂ ಅಧಿಕ ಮಟ್ಟದಲ್ಲಿ ದಾಖಲೆ ಹಿಮಪಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ಸೇರಿದಂತೆ ಪೂರ್ವ ಸಮುದ್ರ ತೀರದ 120,000 ಮನೆಗಳ ವಿದ್ಯುತ್ ಸ್ಥಗಿತಗೊಂಡಿದೆ ಹಾಗೂ ಲಕ್ಷಾಂತರ ಮಂದಿ ಪಾರ್ಶ್ವವಾಯುವಿನಿಂದ ಬಳಲುವಂತಾಗಿದೆ ಎಂದು ಹೇಳಲಾಗಿದೆ.
ಉತ್ತರ ಕೆರೋಲಿನಾ, ಟೆನೆಸ್ಸೀ, ಮೇರಿಲ್ಯಾಂಡ್, ವರ್ಜೀನಿಯಾ, ಫಿಲಡೆಲ್ಫಿಯಾ, ನ್ಯೂಜೆರ್ಸಿ ಹಾಗೂ ವಾಷಿಂಗ್ಟನ್ ಡಿಸಿ ರಾಜ್ಯಗಳು ಅತ್ಯಧಿಕ ಮಟ್ಟದಲ್ಲಿ ಹಿಮಪಾತಕ್ಕೆ ತುತ್ತಾಗಿವೆ. ಪ್ರಬಲ ಬಿರುಗಾಳಿಯೊಂದಿಗೆ ಹಲವು ಇಂಚುಗಳಷ್ಟು ದೊಡ್ಡ ಗಾತ್ರದ ಹಿಮದ ಗಡ್ಡೆಗಳು ಈ ಪ್ರದೇಶಗಳಲ್ಲಿ ಆವರಿಸಿವೆ.
ವಾರಾಂತ್ಯದಲ್ಲಿ 30 ಇಂಚ್ಗೂ ಅಧಿಕ ಮಟ್ಟದಲ್ಲಿ ದಾಖಲೆ ಹಿಮಪಾತ ಸಂಭವಿಸುವ ಸಾಧ್ಯತೆ ಇದ್ದು, ರಾಜಧಾನಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 90 ವರ್ಷಗಳಲ್ಲಿ ಇಂತಹ ಮುನ್ಸೂಚನೆ ಹೊಂದಿದ್ದು, ಕೊಲಂಬಿಯಾ ಜಿಲ್ಲೆಯ ನಿವಾಸಿಗಳು ಸಾವು-ಬದುಕಿನ ನಡುವೆ ಜೀವಿಸುತ್ತಿದ್ದಾರೆ. ಜಿಲ್ಲಾ ರಾಷ್ಟ್ರೀಯ ಸುರಕ್ಷತಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಾಷಿಂಗ್ಟನ್ ಡಿಸಿ ಮೇಯರ್ ಮಿರಿಯಲ್ ಎ ಬೌಸರ್ ತಿಳಿಸಿದ್ದಾರೆ.
ತಾಪಮಾನವು ಶೀತಲ ಮಟ್ಟಕ್ಕಿಂತ ಕೆಳಮಟ್ಟದಲ್ಲಿದ್ದು, ಜನರು ಬೆಚ್ಚಗಿರಲು ವಿವಿಧ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸ್ಥಳೀಯ ಸರ್ಕಾರಗಳು ಹಿಮವನ್ನು ತೆರವುಗೊಳಿಸಲು ನೇಗಿಲು ಮತ್ತು ಉಪ್ಪು ತುಂಬಿದ 100 ಟ್ರಕ್ಗಳನ್ನು ನಿಯೋಜಿಸಿದೆ.
ವರ್ಜಿನಿಯಾ ಹೆಚ್ಚಿನ ಮಟ್ಟದಲ್ಲಿ ತೆಲುಗು ಜನಸಂಖ್ಯೆ ಹೊಂದಿದ್ದು, ಇಲ್ಲಿಯ ದೇವಾಲಯಗಳು, ಗುರುದ್ವಾರಾಗಳು ನಿರಾಶ್ರಿತರಿಗೆ ಆಶ್ರಯ ನೀಡುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.